ಮಾರಣಕಟ್ಟೆ ದೇವಳ ಪ್ರಾಂಗಣ ಸ್ವಚ್ಛತಾ ಕಾರ್ಯ

ಕುಂದಾಪುರ: ರಿಕ್ಷಾ ಚಾಲಕ ಮಾಲಕರ ಸಂಘ ಮಾರಣಕಟ್ಟೆ, ಅಯ್ಯಪ್ಪ ಸ್ವಾಮಿ ಭಕ್ತವೃಂದ, ಶ್ರೀ ಕ್ಷೇತ್ರ ಮಾರಣಕಟ್ಟೆಯ ಹಣ್ಣುಕಾಯಿ ಅಂಗಡಿಯವರು, ದೇವಸ್ಥಾನದ ನೌಕರ ವೃಂದದವರು ಸ್ವಯಂಪ್ರೇರಿತವಾಗಿ ಶನಿವಾರ ಮಾರಣಕಟ್ಟೆ ದೇವಸ್ಥಾನದ ಎದುರು ಪ್ರಾಂಗಣವನ್ನು ಸಂಪೂರ್ಣ ಸ್ವಚ್ಛ ಮಾಡಿದರು.

ಮಾರಣಕಟ್ಟೆ ಬಸ್ ನಿಲ್ದಾಣದಿಂದ ದೇವಸ್ಥಾನದ ತನಕ ಇಡೀ ಪ್ರಾಂಗಣದ ಕಸವನ್ನೆಲ್ಲಾ ತಗೆದು, ಸೋಪ್ ಆಯಿಲ್, ಫಿನೈಲ್ ಬಳಸಿ ನೀರಿನಿಂದ ಪ್ರಾಂಗಣವನ್ನು ತೊಳೆಯಲಾಯಿತು. ಕೊರೋನಾದಿಂದ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಬಂಧ ಹಾಕಿರುವುದರಿಂದ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಯಂ ಪ್ರೇರಿತವಾಗಿ ೪೦ಕ್ಕೂ ಹೆಚ್ಚು ಜನ ಈ ಕಾರ್ಯದಲ್ಲಿ ತೊಡಗಿಸಿಕೊಂಡರು.

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಅಧ್ಯಕ್ಷರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದ ಅಧ್ಯಕ್ಷ ರಾಮಚಂದ್ರ ಮಂಜರು ಚಿತ್ತೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ ಸೇರಿದಂತೆ ಆನೇಕ ಗಣ್ಯರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.