ಕೊಡಗಿನಲ್ಲಿ ‌ಕೊರೊನ ಪಾಸಿಟಿವ್: ದ.ಕ.ಜಿಲ್ಲೆಯಲ್ಲಿ ಹೈ ಅಲರ್ಟ್

ಮಂಗಳೂರು: ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ-ಕೊಡಗು ಗಡಿಭಾಗದಲ್ಲಿ ಹೆಚ್ಚಿನ ತಪಾಸಣೆ‌ ಮಾಡಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು.ಬಿ. ರೂಪೇಶ್ ಹೇಳಿದ್ದಾರೆ.
ಮಂಗಳೂರಲ್ಲಿರೋ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಸುಳ್ಯದಲ್ಲಿ ಸರ್ವೆಲೆನ್ಸ್ ನ್ನು ಹೆಚ್ಚುಗೊಳಿಸಿದ್ದೇವೆ. ಸುಳ್ಯ ಗಡಿಭಾಗದಲ್ಲಿ ನಿಗಾ ಇಡಲಾಗಿದೆ ಎಂದರು.‌
ಮಂಗಳೂರು ಏರ್ ಪೋರ್ಟ್ ನಲ್ಲಿ ಸಹ ಹೈ ಅಲರ್ಟ್ ಇದೆ. ವಿದೇಶದಿಂದ ಬಂದವರನ್ನು ಎ, ಬಿ, ಸಿ ಕ್ಯಾಟಗರಿ ಎಂಬ ವಿಂಗಡಿಸಲಾಗಿದೆ. ಥರ್ಮಲ್ ಸ್ಕಾನ್ ನಲ್ಲಿ ಲಕ್ಷಣ ಇದ್ದವರು ಎ ಕ್ಯಾಟಗೆರಿ‌ಯಲ್ಲಿರುತ್ತಾರೆ.
65 ವರ್ಷ ಮೇಲ್ಪಟ್ಟವರು, ಬಿಪಿ, ಶುಗರ್ ಇದ್ದವರು, ಅರೋಗ್ಯ ಸಮಸ್ಯೆ ಇದ್ದವರು ಬಿ ಕ್ಯಾಟಗೆರಿಯಲ್ಲಿದ್ರೆ ಏನು ಲಕ್ಷಣ ಇಲ್ಲದವರು ಸಿ ಕ್ಯಾಟಗೆರಿಯಲ್ಲಿರ್ತಾರೆ. ಎ ಕ್ಯಾಟಗೆರಿಯವರನ್ನು ನೇರ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಬಿ ಕ್ಯಾಟಗೆರಿಯವರನ್ನು ಸರ್ಕಾರಿ ಕ್ವಾರಂಟೈನ್ ಸೆಂಟರ್ ಗಳಿಗೆ ಸೇರಿಸಿದ್ರೆ ಸಿ ಕ್ಯಾಟಗೆರಿಯವರು ಹೋಮ್ ಕ್ವಾರಂಟೈನ್ ಗೆ ಹೋಗಲಾಗುತ್ತೆ ಎಂದು ಹೇಳಿದ್ದಾರೆ.