ಕೇರಳ: ಕೇರಳದ ತ್ರಿಕನಪುರ ಕಡಲ ತೀರದಲ್ಲಿ ಇಂದು ಮುಂಜಾನೆ ಧ್ಯಾನ ಮಾಡುವ ಸ್ಥಿತಿಯಲ್ಲಿ ಇರುವ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆ ಪ್ರತ್ಯಕ್ಷವಾಗಿದ್ದು, ಹಲವು ವಿಸ್ಮಯಗಳಿಗೆ ಎಡೆಮಾಡಿಕೊಟ್ಟಿದೆ.
ಕಡಲ ತೀರದಲ್ಲಿ ಸ್ವಲ್ಪ ಹೂತಿಕೊಂಡ ಸ್ಥಿತಿಯಲ್ಲಿರುವ ನಾರಾಯಣಗುರುಗಳ ಮೂರ್ತಿ ಓರ್ವ ಮನುಷ್ಯ ಧ್ಯಾನ ಮಾಡುವ ರೀತಿಯಲ್ಲಿದೆ. ಎಷ್ಟೇ ಸಮುದ್ರದ ಅಲೆಗಳು ಬಡಿದರೂ ಮೂರ್ತಿ ಅಲುಗಾಡದೆ ಯಥಾಸ್ಥಿತಿಯಲ್ಲಿ ಇರುವುದು ಅಚ್ಚರಿಗೆ ಕಾರಣವಾಗಿದೆ.
ಇದು ಭಗ್ನಗೊಂಡ ಪ್ರತಿಮೆಯೇ ಅಥವಾ ವಿಸರ್ಜನೆ ಮಾಡಿದ ಪ್ರತಿಮೆಯೆ ಗೊತ್ತಿಲ್ಲ. ಆದರೆ ಚೈತನ್ಯ ತುಂಬಿದ ಕಣ್ಣುಗಳು, ಪ್ರಕಾಶಮಾನವಾದ ಮುಖವನ್ನು ಹೊಂದಿರುವ ಗುರುದೇವರ ಪ್ರತಿಮೆ ಭಾವಭಕ್ತಿ ಮೂಡಿಸುತ್ತಿದೆ. ನೂರಾರು ಸಂಖ್ಯೆಯಲ್ಲಿ ಜನರು ಸಮುದ್ರ ತೀರಕ್ಕೆ ಬಂದು ನಾರಾಯಣ ಗುರುಗಳ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.












