ಉಡುಪಿ ಮಾ.16: ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆಯಡಿ ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಕೊಡಮಾಡಿದ ಲ್ಯಾಪ್ಟಾಪ್ಗಳನ್ನು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾಪು ಶಾಸಕ ಹಾಗೂ ಅಭಿವೃಧ್ಧಿ ಸಮಿತಿಯ ಅಧ್ಯಕ್ಷ ಲಾಲಾಜಿ ಆರ್ ಮೆಂಡನ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ಗಳನ್ನು ಹಸ್ತಾಂತರಿಸಿ, ಲ್ಯಾಪ್ ಟಾಪ್ಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ಶೈಕ್ಷಣಿಕವಾಗಿ ಉತ್ತಮ ಸಾಧನೆಯನ್ನು ಮಾಡುವಂತೆ ಪ್ರೋತ್ಸಾಹಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಕೇತನ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಬಳಕೆಯ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ವಿವಿಧ ಸೂಚನೆಗಳನ್ನಿತ್ತರು.
ಕಾರ್ಯಕ್ರಮದಲ್ಲಿ ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕ ಡಾ. ಅಪ್ಪಾಜಿಗೌಡ, ಉಡುಪಿ ತಾಲೂಕು ಪಂ. ಸದಸ್ಯೆ ಸಂಧ್ಯಾ ಕಾಮತ್, ಬೊಮ್ಮರಬೆಟ್ಟು ಗ್ರಾ. ಪಂ. ಉಪಾಧ್ಯಕ್ಷ ಹರೀಶ್ ಸಾಲ್ಯಾನ್, ಕಾಲೇಜು ಅಭಿವೃಧ್ಧಿ ಸಮಿತಿಯ ಸದಸ್ಯರುಗಳಾದ ಹಿರಿಯ ಆರ್ಥಿಕ ತಜ್ಞ ಡಾ. ಎನ್.ಎಸ್. ಶೆಟ್ಟಿ, ವಸಂತ ಶೆಟ್ಟಿ ಚೆನ್ನಿಬೆಟ್ಟು, ಮುರುಳೀಧರ ಹಾಲಂಬಿ, ಸತ್ಯಾನಂದ ನಾಯಕ್, ಮಾಧವ ನಾಯ್ಕ ಮತ್ತು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಕುದಿ ವಸಂತ ಶೆಟ್ಟಿ, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗಳು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ನಡೆದ ಲ್ಯಾಪ್ಟಾಪ್ ವಿತರಣಾ ಸಮಾರಂಭದಲ್ಲಿ ಅರ್ಹ ಪ್ರಥಮ ಪದವಿಯ 97 ವಿದ್ಯಾರ್ಥಿಗಳು ಲ್ಯಾಪ್ಟಾಪ್ಗಳನ್ನು ಪಡೆದರು.
ಲ್ಯಾಪ್ ಟಾಪ್ ಸಮಿತಿಯ ಸದಸ್ಯರಾದ ಸವಿತಾ, ಅನಿಲ್ ಕುಮಾರ್ ಕೆ. ಎಸ್, ಪ್ರವೀಣ ಶೆಟ್ಟಿ, ಪ್ರಾಧ್ಯಾಪಕ ದಿನೇಶ್ ಎಂ, ಉಪನ್ಯಾಸಕ ರವಿಚಂದ್ರ ಬಾಯರಿ ಹಾಗೂ ಲ್ಯಾಪ್ ಟಾಪ್ ಸಮಿತಿಯ ವಿದ್ಯಾರ್ಥಿ ಸದಸ್ಯರುಗಳಾದ ವೆಂಕಟೇಶ್ ನಾಯಕ್ ಹಾಗೂ ಪ್ರಜ್ಞಾ ಸಹಕರಿಸಿದರು.
ಲ್ಯಾಪ್ ಟಾಪ್ ಸಮಿತಿಯ ಸದಸ್ಯೆ ಸುಜಯಾ ಕೆ. ಎಸ್ ಸ್ವಾಗತಿಸಿ, ವಂದಿಸಿದರು. ಸುಮನ ಬಿ. ಕಾರ್ಯಕ್ರಮ ನಿರೂಪಿಸಿದರು.