ಶ್ರೀ ಅದಮಾರು ಮಠಕ್ಕೆ ಹೊರೆಕಾಣಿಕೆ:ಪೂರ್ವಭಾವಿ ಸಭೆ

ಉಡುಪಿ: ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠಕ್ಕೆ ಕಡೆಕಾರ್ ಮತ್ತು ಸುತ್ತಮುತ್ತಲಿನ ಗ್ರಾಮಗಳ  ಭಕ್ತಾದಿಗಳು  ಜೂ. 7 ರಂದು ಹೊರೆಕಾಣಿಕೆಯನ್ನು ಅರ್ಪಿಸಲಿದ್ದಾರೆ.ಆ ಪ್ರಯುಕ್ತ  ಕಡೆಕಾರ್ ಲಕ್ಷ್ಮೀನಾರಾಯಣ ಮಠದಲ್ಲಿ ಶ್ರೀ ಕೃಷ್ಣ ಸೇವಾಬಳಗದ ಗೋವಿಂದರಾಜ್, ವೈ.ಎನ್.ರಾಮಚಂದ್ರ ರಾವ್, ಪ್ರದೀಪ ರಾವ್ ಇವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯು ನಡೆಯಿತು.ಶ್ರೀಶ ಭಟ್ ಕಡೆಕಾರ್,ಜಯಪ್ರಕಾಶ್ ಕೆದ್ಲಾಯ,ದಿನೇಶ್ ಅಮೀನ್,ರಾಘವೇಂದ್ರ ಆಚಾರ್ಯ.ಮುರಳಿ ಕಡೆಕಾರ್ ಹಾಗೂ ಸುತ್ತ ಮುತ್ತಲಿನ ಸಂಘ ಸಂಸ್ಥೆಗಳ ಅಧ್ಯಕ್ಷರು,ಕಾರ್ಯದರ್ಶಿಗಳು,ಗ್ರಾಮಸ್ಥರು ಈ ಸಭೆಯಲ್ಲಿ ಭಾಗವಹಿಸಿದ್ದರು.