ಪುರಾತತ್ತ್ವ ಶಾಸ್ತ್ರಜ್ಞ ಪ್ರೊ. ಅ. ಸುಂದರ ಅವರಿಗೆ ಕವಿ ಗೋವಿಂದ ಪೈ ಪ್ರಶಸ್ತಿ

ಉಡುಪಿ: ಪ್ರಸಕ್ತ ವರುಷದ  ಪ್ರತಿಷ್ಠಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಹಿರಿಯ  ಪುರಾತತ್ತ್ವ ಶಾಸ್ತ್ರಜ್ಞ ಇತಿಹಾಸಕಾರ  ವಿದ್ವಾಂಸ ಪ್ರೊ. ಅ. ಸುಂದರ ಇವರಿಗೆ  ಸಂದಿದೆ. ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳರು ಅಧ್ಯಕ್ಷರಾಗಿರುವ ಸಮಿತಿಯು ಪ್ರೊ. ಸುಂದರ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ ಮಾರ್ಚ್ ೨೩ರಂದು ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಗೃಹದಲ್ಲಿ ನಡೆಯುವ  ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಾಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ  ಸಂಶೋಧನ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ
ತಿಳಿಸಿರುತ್ತಾರೆ.