ಮೂಡಬಿದ್ರೆ:ಪ್ರಕೃತಿಯು ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಿದ್ದು, ಅದರ ರಕ್ಷಣೆ ನಮ್ಮ ಜವಬ್ದಾರಿ. ಮಾಧ್ಯಮಗಳು ಪರಿಸರದ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ನ ಆದಾಯತೆರಿಗೆಯ ಡೈರೆಕ್ಟರ್ಜನರಲ್ ನರೋತ್ತಮ್ ಮಿಶ್ರ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಹಾಗೂ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ `ಮೀಡಿಯಾ ಆಂಡ್ ಕ್ಲೈಮೇಟ್ ಆಕ್ಷನ್’ ಎಂಬ ವಿಚಾರದ ಕುರಿತು ನಡೆದ ಅಂತರಾಷ್ಟ್ರೀಯ ಸಮ್ಮೇಳನ ಮತ್ತು `ಮೀಡಿಯಾ ಬಝ್ – ೨೦೨೦’ ಮಾಧ್ಯಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ಮಾತೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಏಕೆಂದರೆ ಪ್ರಕೃತಿಯು ಸಮತೋಲನದಲ್ಲಿದ್ದರೆ ನಾವು ಬದುಕಲು ಸಾಧ್ಯ. ಪ್ರಕೃತಿ ಮುನಿಸಿಕೊಂಡರೆ ಬದುಕು ಸರ್ವನಾಶವಾಗುವುದುಖಚಿತ. ಪ್ರಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ನಾವು ಕಾರ್ಯ ನಿರ್ವಹಿಸಬಹುದು ಎಂಬುದನ್ನು ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ನಕಾರಾತ್ಮಕ ವಿಚಾರಗಳನ್ನು ಬದಿಗೊತ್ತಿ ಪ್ರತಿಯೊಂದು ಸೂಕ್ಷ್ಮ ವಿಚಾರದ ಕುರಿತು ಅರಿವನ್ನು ಮೂಡಿಸುವುದು ಮಾಧ್ಯಮಗಳ ಮೂಲಭೂತ ಕರ್ತವ್ಯವಾಗಿದೆ. ಹಾಗೂ ನೈಜತೆಯ ಜತೆಗೆ ಧನಾತ್ಮಕ ವಿಷಯಗಳಿಗೆ ಗಮನಹರಿಸುವುದುಅತ್ಯಗತ್ಯ. ಇದರಿಂದಾಗಿ ಸಮಾಜದಲ್ಲಿ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸಬಹುದು ಎಂದರು.
ಪ್ರಕೃತಿಯ ಮೇಲೆ ಕಾಳಜಿ ತೋರಿದರೆ, ಅದು ನಮ್ಮ ಕಾಳಜಿಯನ್ನು ವಹಿಸುತ್ತದೆ. ಪ್ರಕೃತಿಯನ್ನು ನಾವು ಜವಬ್ದಾರಿಯಿಂದ ಸಂರಕ್ಷಿಸಬೇಕು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಜವಬ್ದಾರಿಯುತ ನಡೆಯ ಅವಶ್ಯಕತೆಯಿದೆ. ಈ ಕ್ಷೇತ್ರದಲ್ಲಿ ಕಾರ್ಯಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಪರಿಸರದಲ್ಲಿನ ವಿವಿಧ ವಿಚಾರಗಳ ಕುರಿತಾದಜ್ಞಾನವನ್ನು ಹೊಂದಿರಬೇಕು.ಆಗ ಮಾತ್ರ ಪ್ರಕೃತಿಯ ಕುರಿತಾಗಿ ಜನರಲ್ಲಿ ಅರಿವನ್ನು ಮೂಡಿಸಲು ಸಾಧ್ಯ ಎಂದುಉಡುಪಿ ಪವರ್ ಕಾರ್ಪೋರೇಷನ್ ಪ್ರವೆಟ್ ಲಿಮಿಟೆಡ್ನ ಅಧ್ಯಕ್ಷ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾವು ಹವಾಮಾನ ಬದಲಾವಣೆಗಳನ್ನು ಅರ್ಥೈಸಿಕೊಳ್ಳುವುದರ ಜತೆಗೆ ಕ್ಷಿಪ್ರ ಬದಲಾವಣೆಯನ್ನು ಗಮನಿಸಬೇಕು.ಆಗ ನಾವು ಅದನ್ನು ಸಂರಕ್ಷಿಸುವುದು ಹೇಗೆ ಎಂಬುದರ ಕುರಿತಾಗಿ ಯೊಚಿಸಬಹುದು. ಮುಂದಿನ ದಿನಗಳಲ್ಲಿ ಹವಮಾನ ಬದಲಾವಣೆಯನ್ನು ಹೇಗೆ ನೀರೂಪಿಸಬಹುದು? ಅದರಿಂದಾಗುವ ಪರಿಣಾಮಗಳನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ವಿಚಾರ ಮಾಡಬೇಕಾಗಿದೆ. ಎಂದು ಇಸ್ರೋದ ಅರ್ತ್ಅಬ್ಸರ್ವೇಶನ್ಅಪ್ಲಿಕೇಶನ್ಸ್ ಮತ್ತುಡಿಸಾಸ್ಟರ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ನ ವಿಜ್ಞಾನಿ ಮತ್ತು ನಿರ್ದೇಶಕ ಪಿ.ಈ ದಿವಾಕರ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾಣೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಯುವಜನರು ಪ್ರಕೃತಿಯನ್ನು ಸಂರಕ್ಷಿಸುವ ಜವಬ್ದಾರಿಯನ್ನು ಹೊರಬೇಕು.ಜತೆಗೆಅದರಕುರಿತಾದಜ್ಞಾನವನ್ನು ಹೊಂದಬೇಕು. ಯಾವುದೇ ವಿಚಾರದ ಕುರಿತು ಅಪಾರಜ್ಞಾನವನ್ನು ಹೊಂದುವ ಮಹತ್ವಾಕಾಂಕ್ಷಿಗಳಾಗಬೇಕೆ ಹೊರತು, ಚೌಕಟ್ಟನ್ನು ನಿರ್ಮಿಸಿಕೊಳ್ಳಬಾರದು. ವಿದ್ಯಾರ್ಥಿಜೀವನವು ನಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುವ ವಯಸ್ಸು. ಆದ್ದರಿಂದ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ವಿಮರ್ಶೆ ಮಾಡುವ ಮತ್ತುಅದರಿಂದ ಅನೇಕ ವಿಚಾರಗಳನ್ನು ಕಲೆ ಹಾಕುವ ಚಾಣಾಕ್ಷತನವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಧನಲಕ್ಷ್ಮಿಕಾಶ್ಯೂ ಇಂಡಸ್ಟ್ರಿಯ ಮಾಲಿಕ ಕೆ.ಶ್ರೀಪತಿ ಭಟ್, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ್ ಪೆಜತ್ತಾಯ, ಪದವಿ ಕಲಾ ವಿಭಾಗದ ಡೀನ್ ಸಂಧ್ಯಾ.ಕೆ.ಎಸ್, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉಪಸ್ಥಿತರಿದ್ದರು. ಇಕೋಲಿಂಕ್ನಮ್ಯಾನೇಜಿಂಗ್ಡೈರೆಕ್ಟರ್ಥಾಮಸ್ ಸ್ಕರಿಯ ವಂದಿಸಿ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಾಗತಿಸಿ, ವಿದ್ಯಾರ್ಥಿನಿ ಗ್ರೇಶಲ್ ಕಾರ್ಯಕ್ರಮವನ್ನು ನಿರೂಪಿಸಿದರು.ಮಾಧ್ಯಮೋತ್ಸವದ ಸಲುವಾಗಿ ಪದವಿ ವಿದ್ಯಾರ್ಥಿಗಳು ತಯಾರಿಸಿದ ಆಳ್ವಾಸ್ ಮಿರರ್, ಆಳ್ವಾಸ್ ಮಾಧ್ಯಮ ಮತ್ತು ಆಳ್ವಾಸ್ ಸುದ್ದಿಮನೆ ವಿಶೇಷ ಸಂಚಿಕೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.ಜತೆಗೆ ಪದವಿ ಸ್ನಾತಕೋತ್ತರ ವಿದ್ಯಾರ್ಥಿ ಮಂಜುನಾಥ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆಳ್ವಾಸ್ ಸಿರಿ ಅಭಿಮಾನದಗರಿ’ ಎಂಬ ಆಲ್ಬಮ್ ಸಾಂಗ್ನಆಡಿಯೋ ಲಾಂಚ್ ಮಾಡಲಾಯಿತು.
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪದ್ಮಶ್ರೀ ತುಳಸಿಗೌಡರಿಗೆ ಸಮರ್ಪಿತ ‘ವೃಕ್ಷಸ್ವರ’ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.
ಹಾಗೆಯೇ ಸ್ನಾತಕೋತ್ತರ ಪತ್ರಿಕೋದ್ಯಮವಿಭಾಗದ ವತಿಯಿಂದ ಮೂಡಿಬಂದ `ದಂತಿ’ ಇದು ಗಜರಾಜನದೃಶ್ಯಕಾವ್ಯ ಎಂಬ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದರು.