ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪರ, ವಿರೋಧ ಹೋರಾಟಗಾರರ ನಡುವೆ ಘರ್ಷಣೆ ನಡೆದಿದ್ದು, ಈ ಹಿಂಸಾಚಾರವನ್ನು ತಹಬದಿಗೆ ತರಲು ದೆಹಲಿ ಪೊಲೀಸರು ಕಠಿಣ ಕ್ರಮವನ್ನು ಕೈಗೊಂಡಿದೆ. ಪ್ರತಿಭಟನಾಕಾರರ ಹಿಂಸಾಚಾರ ಹೆಚ್ಚು ನಡೆಯುತ್ತಿರುವ ಈಶಾನ್ಯ ದೆಹಲಿಯ ಭಾಗದಲ್ಲಿ ಕಂಡಲ್ಲಿ ಗುಂಡು ಆದೇಶ ಜಾರಿ ಮಾಡಲಾಗಿದೆ. ರಸ್ತೆಯಲ್ಲಿ ಯಾರೇ ಕಂಡರು ಅವರಿಗೆ ಗುಂಡು ಹೊಡೆಯಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ.
11 ಬಲಿ, 70 ಮಂದಿಗೆ ಗುಂಡೇಟು:
ಈಶಾನ್ಯ ದೆಹಲಿಯ ಚಾಂದ್ ಬಾಗ್, ಭಜನ್ ಪುರ ಮುಂತಾದ ಭಾಗಗಳಲ್ಲಿ ರಾತ್ರಿ ಆಗುತ್ತಿದ್ದಂತೆ ಪ್ರತಿಭಟನಾಕಾರರ ಹಿಂಸಾಚಾರ ಹೆಚ್ಚಾದ ಕಾರಣ ದೆಹಲಿ ಪೊಲೀಸರು ಈ ಆದೇಶ ಹೊರಡಿಸಿದೆ. ಈ ಹಿಂಸಾಚಾರಕ್ಕೆ ಈಗಾಗಲೇ 11 ಮಂದಿ ಸಾವನ್ನಪ್ಪಿದ್ದಾರೆ. ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಇಂದು ಸಾಯಂಕಾಲ ಮಾಲ್ ಗೆ ಬೆಂಕಿ ಹಚ್ಚಲಾಗಿದೆ. ದೆಹಲಿಯಲ್ಲಿ 6೦೦೦ಕ್ಕೂ ಹೆಚ್ಚು ಮಂದಿ ಭದ್ರತಾ ಸಿಬ್ಬಂದಿ ಹಾಗೂ ಸಿಆರ್ ಪಿಎಫ್ ಯೋಧರನ್ನೂ ನಿಯೋಜಿಸಲಾಗಿದೆ.