ಉಡುಪಿ: ಯೋಗಾಸನದ ಮೂಲಕ ನಾಲ್ಕು ವಿಶ್ವದಾಖಲೆಗಳನ್ನು ಮಾಡಿರುವ ಯೋಗಪಟು ತನುಶ್ರೀ ಪಿತ್ರೋಡಿ ಅವರು ಇದೇ 22ರಂದು ಸಂಜೆ 4.30ಕ್ಕೆ ಉದ್ಯಾವರ ಗ್ರಾಮ ಪಂಚಾಯಿತಿ ಮೈದಾನದಲ್ಲಿ ‘ಚಕ್ರಾಸನ ರೇಸ್’ ವಿಭಾಗದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಪ್ರಯತ್ನಿಸಲಿದ್ದಾರೆ.
ಈ ಬಗ್ಗೆ ತನುಶ್ರೀ ಅವರ ತಂದೆ ಉದಯಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ‘ಚಕ್ರಾಸನ ರೇಸ್’ ವಿಭಾಗದಲ್ಲಿ ವಿಶ್ವದಾಖಲೆ ಮಾಡಿದ ಸಾಧನೆ ಹಿಮಾಚಲ ಪ್ರದೇಶದ ಆಶೀಶ್ ಎಂಬುವವರ ಹೆಸರಿನಲ್ಲಿದೆ. ಅವರು 2019ರಲ್ಲಿ 3.34 ನಿಮಿಷದಲ್ಲಿ 100 ಮೀ. ಕ್ರಮಿಸುವ ಮೂಲಕ ‘ಚಕ್ರಾಸನ ರೇಸ್’ ವಿಶ್ವದಾಖಲೆ ಮಾಡಿದ್ದಾರೆ. ಈ ದಾಖಲೆಯನ್ನು
ತನುಶ್ರೀ ಅವರು ಸರಿಗಟ್ಟಲು ಪ್ರಯತ್ನ ನಡೆಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಜಯ ಕೋಟ್ಯಾನ್, ಸುರಭಿ ರತನ್, ರಾಘವೇಂದ್ರ ಶೇರಿಗಾರ್ ಇದ್ದರು.