ವಂಡ್ಸೆ ಮಾತೃಭೂಮಿ ಯುವ ಸಂಘಟನೆ ವಾರ್ಷಿಕೋತ್ಸವ

ಕುಂದಾಪುರ;  ಗ್ರಾಮೀಣ ಭಾಗದಲ್ಲಿ ಯುವ ಜನತೆಯ ಒಗ್ಗೂಡುವಿಕೆ ಗ್ರಾಮದ ಬೆಳವಣಿಗೆಯಲ್ಲಿ ಪೂರಕವಾಗುತ್ತದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಯುವ ಜನತೆ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಗ್ರಾಮದ ಪ್ರಗತಿಯ ಬಗ್ಗೆ ಚಿಂತನೆ ನಡೆಸಬೇಕು. ಸೇವಾ ಕಾರ್ಯಗಳ ಮೂಲಕ ಸಮಾಜಮುಖಿಯಾಗಿರಬೇಕು. ಆ ಹಿನ್ನೆಲೆಯಲ್ಲಿ ಆತ್ರಾಡಿಯ ಈ ಸಂಘಟನೆ ಸೇವೆಯ ಮಾರ್ಗದಲ್ಲಿ ಸಾಗುತ್ತಿದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಅವರು ವಂಡ್ಸೆ ಆತ್ರಾಡಿಯ ಶ್ರೀ ಬ್ರಹ್ಮಲಿಂಗೇಶ್ವರ ದೇವಾಸ್ಥಾನ ವಠಾರದಲ್ಲಿ ನಡೆದ ಮಾತೃಭೂಮಿ ಯುವ ಸಂಘಟನೆ ಆತ್ರಾಡಿ ಇದರ ದ್ವಿತೀಯ ವಾರ್ಷಿಕೋತ್ಸವ ‘ಪಲ್ಲವ-೨೦೨೦’ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದ ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ ಮಾತನಾಡಿದರು.

ಈ ಸಂದರ್ಭದಲ್ಲಿ ವಂಡ್ಸೆ ಎಸ್.ಎಲ್.ಆರ್.ಎಂನ ಯಶಸ್ವಿ ಅನುಷ್ಟಾನದ ರೂವಾರಿ ವಂಡ್ಸೆ ಗ್ರಾ.ಪಂ.ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರಿಗೆ ‘ಸ್ವರಾಜ್ಯ ಶಿಲ್ಪಿ’ ಬಿರುದಿನೊಂದಿಗೆ ಸನ್ಮಾನಿಸಲಾಯಿತು. ಎ.ಪಿ.ಎಂ.ಸಿ ಸದಸ್ಯರೂ ಹಾಗೂ ವಂಡ್ಸೆ ಸಿ.ಎ ಬ್ಯಾಂಕ್ ನಿರ್ದೇಶಕರಾದ ಸಂಜೀವ ಪೂಜಾರಿ ವಂಡ್ಸೆ ಲಾಂಛನ ಅನಾವರಣಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಉದ್ಯಮಿ ಬಿ.ಎಂ. ಬಾಳಿಕೆರೆ, ಬೆಂಗಳೂರಿನ ಇ-ಸೈನ್ ಈಕ್ವೈರ್‌ಮೆಂಟ್ ಪ್ರೈ.ಲಿನ ಸಿ.ಎಂ.ಡಿ ದಿನೇಶ ವೈದ್ಯ, ಬೆಂಗಳೂರು ನೇಸರ ಸೈನ್ ಕ್ರಿಯೇಟರ್ಸ್‌ನ ಮುಖ್ಯಸ್ಥರು ಹಾಗೂ ಬೆಂಗಳೂರು ಮೊಗವೀರ ಸಂಘದ ಮಾಜಿ ಅಧ್ಯಕ್ಷರಾದ ನರಸಿಂಹ ಬೀಜಾಡಿ, ಬೆಂಗಳೂರು ಉದ್ಯಮಿ ಕುಸುಮಾಕರ ಶೆಟ್ಟಿ ಅಡಿಕೆಕೊಡ್ಲು, ಬೆಂಗಳೂರಿನ ಕೈಗಾರಿಗೋದ್ಯಮಿ ರಮೇಶ್ ದೇವಾಡಿಗ ಅಡಿಕೆಕೊಡ್ಲು, ಬೆಂಗಳೂರು ಉದ್ಯಮಿ ಜೀವನ ಶೆಟ್ಟಿ ಐರ್‌ಬೈಲ್, ಮೋಹನದಾಸ ಹೆಗ್ಡೆ ಹೆಬ್ರಿ ಆತ್ರಾಡಿ, ಬೆಳಗಾವಿ ಉದ್ಯಮಿ ನವೀನ ಕುಮಾರ ಶೆಟ್ಟಿ ಆಲೂರು, ಹಿಜಾಣದ ಚಿಕ್ಕು ಯುವ ಸಂಘಟನೆಯ ಅಧ್ಯಕ್ಷ ಜಯರಾಮ ಶೆಟ್ಟಿ ಬೆಳ್ವಾಣ, ಬೆಂಗಳೂರು ಮಹಾಲಕ್ಷ್ಮೀ ಕ್ಯಾಟರರ್‍ಸ್‌ನ ಉದ್ಯಮಿ ಗಣೇಶ ಶೆಟ್ಟಿ ನಡಾಡಿ ಹೊಸೂರು, ಮಾತೃಭೂಮಿ ಯುವ ಸಂಘಟನೆಯ ಗೌರವಾಧ್ಯಕ್ಷ ಶ್ರೀನಿವಾಸ ಪೂಜಾರಿ ಕಲ್ಮಾಡಿ ಆಗಮಿಸಿದ್ದರು.

ಸಂಘಟನೆಯ ಅಧ್ಯಕ್ಷರಾದ ಸಂದೇಶ ಕುಮಾರ್ ಶೆಟ್ಟಿ ಸ್ವಾಗತಿಸಿದರು. ದಿವ್ಯಾಶ್ರೀ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜು ಪೂಜಾರಿ ಕಲ್ಮಾಡಿ ವರದಿ ಮಂಡಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ ದೇವಾಡಿಗ ಸನ್ಮಾನ ಪತ್ರ ವಾಚಿಸಿದರು.ಕೋಶಾಧಿಕಾರಿ ಪ್ರಸಾದ್ ಆಚಾರ್ಯ ಕ್ರೀಡಾ ವಿಜೇತರ ಪಟ್ಟಿ, ಪ್ರಥ್ವಿರಾಜ್ ಶೆಟ್ಟಿ ಪೋಷಕರ ಪಟ್ಟಿ, ವಾಚಿಸಿದರು. ಸ್ಥಾಪಕಧ್ಯಕ್ಷ ಗಣೇಶ ದೇವಾಡಿಗ, ಸುಮ ಗಂಗೊಳ್ಳಿ, ಶಿಕ್ಷಕಿ ಕುಸುಮ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿ, ದಿನೇಶ ವಂದಿಸಿದರು.
ಸಭಾ ಕಾರ್ಯಕ್ರಮ ಪೂರ್ವದಲ್ಲಿ ನೂಪುರ ನೃತ್ಯ ಕಲಾ ತಂಡ ಬೈಂದೂರು ಇವರಿಂದ ನೃತ್ಯ ವೈವಿಧ್ಯ, ಬಳಿಕ ಬಡಗುತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಸಂಯೋಜನೆಯಲ್ಲಿ ‘ಮಧುರಾ ಮಹೇಂದ್ರ’ ಯಕ್ಷಗಾನ ಪ್ರದರ್ಶನಗೊಂಡಿತು.