ಕಾರ್ಕಳ: ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ ಉಪ ಸಮಿತಿಯ ಸಭೆ

ಕಾರ್ಕಳ: ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ ಇದರ ಕಾರ್ಕಳ ತಾಲೂಕಿನ ಉಪ ಸಮಿತಿಯ ಸಭೆಯು ಕಾರ್ಕಳದ ಕಿಸಾನ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದ, ಚಲನಚಿತ್ರ ನಿರ್ದೇಶಕ, ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ವಹಿಸಿದ್ದರು. ಉದ್ಯಮಿ ಜೆರಾಲ್ಡ್ ಡಿ’ಸಿಲ್ವ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕಲಾವಿದರಿಗೆ ಸರಸ್ವತಿ ಒಲಿಯುತ್ತಾರೆ. ವಿನ ಲಕ್ಷ್ಮೀ ಒಲಿಯುವುದು ಅಪರೂಪ, ಈ ನಿಟ್ಟಿನಲ್ಲಿ ಕಲಾವಿದರ ಭದ್ರತೆಗಾಗಿ ಸಂಘಟನೆ ಅಗತ್ಯ. ಇದರೊಂದಿಗೆ ಹವ್ಯಾಸಿ ಕಲಾವಿದರನ್ನು ಸೇರಿಸಬೇಕಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಮಿಯ್ಯಾರು ಪ. ಸದಸ್ಯರಾದ ತಾರನಾಥ್ ಬಿ. ಸುವರ್ಣ ಶುಭ ಹಾರ್‍ಯಸಿದರು.

ಪರಿಷತ್ತಿನ ಸ್ಥಾಪಕ ಸದಸ್ಯ ರಮೇಶ್ ರೈ ಕುಕ್ಕುವಳ್ಳಿ ಸಂಘಟನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡುತ್ತ ಕಲಾವಿದರಿಗಾಗಿ ಭವಿಷ್ಯನಿಧಿ, ವಿದ್ಯಾನಿಧಿ ಈ ಧನ ಸಹಾಯ ಮಾಡುವ ಬಗ್ಗೆ ತಿಳಿಸಿದರು. ಸಂಘಟನೆಯನ್ನು ಬಲಪಡಿಸುವ ಬಗ್ಗೆ ಪರಿಷತ್‌ನ ಅಧ್ಯಕ್ಷರಾದ ಮೋಹನ್‌ದಾಸ್ ಕೊಟ್ಟಾರಿ, ಸದಸ್ಯರಾದ ಚಿದಾನಂದ ಅದ್ಯಪಾಡಿ, ಜಯರಾಜ್ ಅತ್ತಾಚೆ, ಸಚಿನ್ ಅತ್ತಾಚೆ ಉಪಸ್ಥಿತರಿದ್ದರು. ಕಾರ್ಕಳ ಉಪಸಮಿತಿಯ ಸಂಘಟನಾ ಕಾರ್ಯದರ್ಶಿಗಳಾಗಿ ಸಂದೀಪ್ ಬಾರಾಡಿ ಹಾಗೂ ಕೆ. ನಾರಾಯಣ್ ಟೈಲರ್ ಆಯ್ಕೆಯಾದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಣ್ಣೂರು ಕಾರ್ಯಕ್ರಮ ನಿರ್ವಹಿಸಿದರು. ಸಂದೀಪ್ ಬಾರಾಡಿ ಅವರು ಸ್ವಾಗತಿಸಿದರು.