ಉಡುಪಿ: ಜಿ. ಶಂಕರ್ ಶ್ಯಾಮಿಲಿ ಸಮೂಹ ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯ ಹಾಲಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯ ಹಾಗೂ ಸುಸಜ್ಜಿತವಾದ ಸಂಪೂರ್ಣ ಹವಾನಿಯಂತ್ರಿತ ಸಭಾಭವನ ‘ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್’ ಫೆ.17ರಂದು ಉದ್ಘಾಟನೆಗೊಳ್ಳಲಿದೆ. ಜೊತೆಗೆ 1 ಸಾವಿರ ಆಸನ ವ್ಯವಸ್ಥೆ ಹೊಂದಿರುವ ‘ಓಪನ್ ಗಾರ್ಡನ್ ಸಭಾಂಗಣ’ದ ಪ್ರವೇಶೋತ್ಸವ ಸಮಾರಂಭ ಇದೇ ದಿನ ಅದ್ದೂರಿಯಾಗಿ ನಡೆಯಲಿದೆ.ಅಪರಾಹ್ನ ಗಂಟೆ 12:30ರಿಂದ ಭೋಜನ ವ್ಯವಸ್ಥೆ, ಸಾಯಂಕಾಲ ಗಂಟೆ 5 ರಿಂದ ಭಜನಾ ಕಾರ್ಯಕ್ರಮಗಳು, ಗಂಟೆ 7ರಿಂದ ಪೆರ್ಡೂರು ಮೇಳದ ಕಲಾವಿದರಿಂದ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ನಡೆಯಲಿದೆ.
ವಿಶೇಷಗಳೇನು?
ಸಭಾಂಗಣವು ಸಂಪೂರ್ಣ ಹವಾನಿಯಂತ್ರಿತ 750 ಆಸನಗಳು, ವಿಶಾಲವಾದ ಊಟದ ಹಾಲ್, ವೆಚ್ ಮತ್ತು ನಾನ್ ವೆಚ್ ಪ್ರತ್ಯೇಕ ಅಡುಗೆಕೋಣೆಗಳು ಹೊಂದಿದೆ.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ 250+82+62 KVA ಜನರೇಟರ್ಸ್, 22,000 ಚದರ ವಿಸ್ತೀರ್ಣವಾದ ಸ್ಥಳ, ಸಭಾಂಗಣದ ಅತಿ ಸನಿಹದಲ್ಲೇ ಅನುಗ್ರಹದಾತ ಭಕ್ತಿಯದ್ಯೋತಕ ಶ್ರೀ ಪ್ರಸನ್ನ ಗಣಪತಿ ಮಂದಿರ ಹೊಂದಿದೆ.
ಓಪನ್ ಗಾರ್ಡನ್ ಸಭಾಂಗಣವು ವಿಶಾಲವಾದ ಊಟದ ಹಾಲ್, ವೆಚ್ ಮತ್ತು ನಾನ್ ವೆಚ್ ಪ್ರತ್ಯೇಕ ಅಡುಗೆ ಕೋಣೆಗಳು ಒಳಗೊಂಡಿದೆ.