ಪುಟ್ಟದ್ದೊಂದು ನೆಲ್ಲಿಕಾಯಿಯಲ್ಲಿದೆ ಆರೋಗ್ಯದ ಗುಟ್ಟು.ನೆಲ್ಲಿಕಾಯಿಯಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಗುಣಗಳಿವೆ. ನೆಲ್ಲಿಕಾಯಿಯಿಂದ ಏನೇನ್ ಲಾಭ ಇದೆ ಅನ್ನೋದನ್ನು ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ಹೇಳಿದ್ದಾರೆ. ಜಸ್ಟ್ ಓದಿ ಫಾಲೋ ಮಾಡಿ.
ನಮ್ಮಆರೋಗ್ಯ, ಚೈತನ್ಯವನ್ನು ಹೆಚ್ಚಿಸುವುದರಿಂದ ಹಾಗೂ ಆ್ಯಂಟಿ ಏಜಿಂಗ್ ಗುಣ ಇರುವುದರಿಂದ ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಬಳಸುವುದು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಇದೊಂದು ಅದ್ಭುತವಾದ ಮೂಲಿಕೆ. ನಮ್ಮ ಇಡೀ ಶರೀರದ ರಕ್ಷಣೆ ಮಾಡುತ್ತದೆ. ಇದು ಐದು ರಸಗಳಿಂದ ಕೂಡಿದೆ(ಲವಣರಸವನ್ನು ಬಿಟ್ಟು) ಇದು ತ್ರಿದೋಷಗಳನ್ನುಅಂದರೆ ವಾತ, ಪಿತ್ತ, ಕಫ ದೋಷಗಳನ್ನು ಸಮತೋಲನದಲ್ಲಿಡುತ್ತದೆ.ಆದ್ದರಿಂದ ಯಾವುದೇ ಪ್ರಕೃತಿಯ ಮನುಷ್ಯರು ಇದನ್ನು ಸೇವಿಸಬಹುದು .
ಲಾಭ ಏನ್ ಗೊತ್ತಾ?
- ನೆಲ್ಲಿಕಾಯಿ ಆ್ಯಂಟಿ ಆಕ್ಸಿಡೆಂಟ್ ಇರುವುದರಿಂದ ನಮ್ಮ ತ್ವಚೆಗೆ, ಕಣ್ಣಿಗೆ, ಕೂದಲಿಗೆ ಹಾಗೂ ಉಗುರುಗಳಿಗೆ ಒಳ್ಳೆಯದು.
- ಇದು ನಮ್ಮ ಶ್ವಾಸಕೋಶಕ್ಕೆ ಹೃದಯಕ್ಕೆ ಹಾಗೂ ಯಕೃತ್ತಿಗೆ ಹಿತ.
- ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ಮಲಬದ್ಧತೆ ಇರುವವರಿಗೆ ಉತ್ತಮ .ಜಠರಾಗ್ನಿ ಯನ್ನು ಸಮತೋಲನದಲ್ಲಿ ಇಡುತ್ತದೆ. ಆ್ಯಸಿಡಿಟಿ, ಎದೆ ಉರಿಯನ್ನು ಕಡಿಮೆ ಮಾಡುತ್ತದೆ
- ಇಮ್ಯುನಿಟಿ ಯನ್ನು ಹೆಚ್ಚಿಸುತ್ತದೆ ದೇಹ ಶುದ್ಧಿಗೆ ಉತ್ತಮ
- ಜ್ಞಾನೇಂದ್ರಿಯ ಹಾಗೂ ನಮ್ಮ ಮನಸ್ಸಿಗೆ ಹಿತ ನೀಡುತ್ತದೆ.
- ಶಕ್ತಿವರ್ಧಕ ಹಾಗೂ ಯವ್ವನವನ್ನು ಕಾಪಾಡುತ್ತದೆ .
- ಬ್ಲಡ್ ಶುಗರನ್ನು ಕಡಿಮೆಗೊಳಿಸುತ್ತದೆ .
ಒಮ್ಮೆ ಹೀಗೆ ಮಾಡಿ ನೋಡಿ
- 1/4 ಚಮಚ ನೆಲ್ಲಿ ಪೌಡರ್ ಒಂದು ಚಮಚ ಜೇನುತುಪ್ಪ ಒಂದು ಗ್ಲಾಸ್ ಬೆಪ್ಪು ನೀರಿನಲ್ಲಿ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ .
2.ಒಂದು ನಿಂಬೆ ಹಣ್ಣಿನ ಜ್ಯೂಸ್ ನಲ್ಲಿ ಸ್ವಲ್ಪ ಪುದೀನ, ಒಂದು ಚಮಚ ಜೇನುತುಪ್ಪ ಹಾಗೂ 1/4 ಚಮಚನೆಲ್ಲಿಕಾಯಿ ಪೌಡರ್ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
- ತರಕಾರಿ ಜ್ಯೂಸ್ ಹಾಗೂ ಸೂಪ್ ಗಳಲ್ಲಿ ಉಪಯೋಗಿಸಬಹುದು .
- ನಲ್ಲಿ ಪೌಡರನ್ನು ನೀರಿನಲ್ಲಿ ಮಿಕ್ಸ್ ಮಾಡಿ ಹೇರ್ ಪ್ಯಾಕ್ ಅಥವಾ ಫೇಸ್ ಪ್ಯಾಕ್ ಹಚ್ಚಬಹುದು. ಇದು ಕೂದಲಿನ ಸಮಸ್ಯೆಗೆ ಹಾಗೂ ಬೆಳವಣಿಗೆಗೆ ಉತ್ತಮ . ಹಾಗೂ ಮುಖದ ಅಂದವನ್ನು ಹೆಚ್ಚಿಸುತ್ತದೆ .
- ನೆಲ್ಲಿಕಾಯಿ ಮೊರಬ್ಬ ಮಾಡಬಹುದು .