ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆ 6.30 ಕ್ಕೆ ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕದ ಆರಂಭವಾಗಲಿದೆ. 9.37ರ ಕುಂಭಲಗ್ನದಲ್ಲಿ ಪ್ರಧಾನಕಲಶಾಭಿಷೇಕ ನಡೆಯಲಿದೆ. ಅಲ್ಲಿ ತನಕ ದೇವಳದ ಶೇಕಡಾ 90 ಧಾರ್ಮಿಕ ವಿಧಿವಿಧಾನ ಹಾಗೂ ಕಲಶಗಳಿಗಾಗಿ ಮುಚ್ಚಲ್ಪಟ್ಟಿರುತ್ತದೆ.
ದೇವರಿಗೆ ಬ್ರಹ್ಮಕಲಶಾಭಿಷೇಕದ ನಡೆಯುವ ಸಂದರ್ಭದಲ್ಲಿ ದೇವಾಲಯದ ಒಳಗೆ ನೂರರಷ್ಟು ಮಂದಿ ಮಾತ್ರ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೇ ಸರದಿ ಸಾಲಿನಲ್ಲಿ ಬಂದರೂ ದರ್ಶನ ಕಷ್ಟ. ಹಾಗಾಗಿ ಕಲಶಾಭಿಷೇಕ ಪುಣ್ಯ ಕಾರ್ಯಗಳನ್ನು ಎಲ್ಲರೂ ನೋಡುದಕ್ಕಾಗಿ ದೂರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಮನೆಯಲ್ಲೇ ನೋಡಿ ಅಂತ ಬ್ರಹಮಕಲಶೋತ್ಸವ ಸಮಿತಿ ಸಂಚಾಲಕ ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ ಮನವಿ ಮಾಡಿದ್ದಾರೆ.
ಅನಂತರ ಬೆಳಿಗ್ಗೆ ಹತ್ತೂವರೆಗೆ ದೇವಳವು ಪೂರ್ಣವಾಗಿ ತೆರೆದುಕೊಳ್ಳುವುದರಿಂದ ಪ್ರದಕ್ಷಿಣೆ ಸುಲಭಸಾಧ್ಯ. ಹಾಗಾಗಿ ಭಕ್ತಾದಿಗಳು ಮನೆಯಲ್ಲೇ ನಮ್ಮಕುಡ್ಲ ವಾಹಿನಿಯಲ್ಲಿ ನೇರಪ್ರಸಾರದ ಮೂಲಕ ಬ್ರಹ್ಮಕಲಶಾಭಿಷೇಕವನ್ನು ವೀಕ್ಷಿಸಿ ತದನಂತರ ಮನೆಯಿಂದ ಹೊರಟು ಕಟೀಲಿಗೆ ಬರಬೇಕಾಗಿ ಕೇಳಿಕೊಂಡಿದ್ದಾರೆ.