ಸರ್ವೋತ್ತಮ ಸೇವಾ ಪ್ರಶಸ್ತಿಗೆ ಶ್ರೀ ಪ್ರಕಾಶ್ ನಾಯಕ್ ಆಯ್ಕೆ 

ಮಂಗಳೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಪೈಕಿ ಅತ್ಯುತ್ತಮ ಸೇವೆ ನೀಡಿ ಸಾಧನೆಗೈದು ನಾಡಿನ ಜನತೆಯ ಮುಖದಲ್ಲಿ ಮುಗುಳ್ನಗೆ ತಂದು ಸರಕಾರಿ ಕೆಲಸದಲ್ಲಿ ವಿನೂತನ ಪದ್ಧತಿ, ನಾಗರಿಕ ಸ್ನೇಹಿ, ಗುಣಾತ್ಮಕ, ಭ್ರಷ್ಟಾಚಾರ ರಹಿತ ಕಾರ್ಯವೆಸಗಿದ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸರಕಾರವು ಪ್ರತಿ ವರ್ಷ ನೀಡುತ್ತಿದ್ದು 2019-2020 ನೆಯ ಸಾಲಿನ ಈ ಪ್ರಶಸ್ತಿಗೆ ನ್ಯಾಯಾಂಗ ಇಲಾಖೆಯ ಶಿರಸ್ತೆದಾರ್  ಪ್ರಕಾಶ್ ನಾಯಕ್ ಅವರು ಆಯ್ಕೆಯಾಗಿದ್ದಾರೆ.
ಕಳೆದ ಮೂರು ದಶಕಗಳಿಂದ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ನಾಯಕ್ ಅವರು ತಮ್ಮ ದಕ್ಷ ಹಾಗೂ ಸಮರ್ಪಣಾ ಭಾವದ ಸೇವೆಗಾಗಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಹ ವ್ಯಕ್ತಿಯೆಂದು ಪರಿಗಣಿಸಲ್ಪಟ್ಟಿದ್ದಾರೆ.
ಪ್ರಸ್ತುತ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸಂಕೀಣ೯ದಲ್ಲಿರುವ ಜುಡಿಶಿಯಲ್ ಸವಿ೯ಸ್‌ ಸೆಂಟರ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕಾನೂನು ಪದವಿ ಹಾಗೂ ಕಾನೂನು ಸ್ನಾತಕೋತರ ಪದವಿಯನ್ನು ಪಡೆದಿರುತ್ತಾರೆ.
ಸೇವಾ ಸಂಬಂಧಿತ ಕಾನೂನುಗಳ ಬಗ್ಗೆ ವಿಶೇಷ ಅದ್ಯಯನ ನಡೆಸಿರುವ ಇವರು ಪ್ರತಿ ವರ್ಷ ಕನಾ೯ಟಕ ಲೋಕಸೇವಾ ಆಯೋಗವು ನಡೆಸುವ ಇಲಾಖಾ ಪರೀಕ್ಷೆಗಳಿಗೆ ಹಾಜರಾಗುವ ಸರಕಾರಿ ನೌಕರರಿಗೆ ಉಚಿತ ತರಬೇತಿ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಕನಾ೯ಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘ ಮತ್ತು ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ದ.ಕ.ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ತಮ್ಮ ಸೇವಾವಧಿಯಲ್ಲಿ ನೌಕರರಿಗೆ ಉಪಯುಕ್ತವಾಗಿರುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಿದ್ದಾರೆ.  ಪ್ರಸ್ತುತ ಅವಿಭಜಿತ ದ.ಕ.ಜಿಲ್ಲೆಯ ಸರಕಾರಿ ನೌಕರರ ಹೆಮ್ಮೆಯ ಆಥಿ೯ಕ ಸ೦ಸ್ಥೆಯಾಗಿರುವ ದಿ ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ ಕೋ ಆಪರೇಟಿವ್ ಬ್ಯಾಂಕಿನ* ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜ.26ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಜರಗಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.