ಕುಂದಾಪುರ: ಜ.೨ ರಂದು ಗಂಗೊಳ್ಳಿ ಗ್ರಾಮ ಪಂಚಾಯಿತಿಯ ೩೩ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದ್ದಿದು, ಒಟ್ಟು ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ೨೩, ಕಾಂಗ್ರೆಸ್ ಬೆಂಬಲಿತ ೬ ಹಾಗೂ ಎಸ್ಡಿಪಿಐ ಬೆಂಬಲಿತ ೪ ಮಂದಿ ಗೆಲುವು ಸಾಧಿಸಿದ್ದಾರೆ.
ಪಂಚಾಯಿತಿ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಬೆಂಬಲಿತರು ಪಂಚಾಯಿತಿಯ ಅಧಿಕಾರ ಗದ್ದುಗೆ ಹಿಡಿದಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ೧೯ ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಕಳೆದ ಬಾರಿ ೧೪ ಸ್ಥಾನವನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿ ೬ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ೪ ಸ್ಥಾನವನ್ನು ಪಡೆದುಕೊಂಡಿರುವ ಎಸ್ಡಿಪಿಐ ಮೊದಲ ಬಾರಿ ಪಂಚಾಯಿತಿ ಪ್ರವೇಶ ಮಾಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್೩೩ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಎಸ್ಡಿಪಿಐ ೮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿತ್ತು.
ಚುನಾವಣಾಧಿಕಾರಿ ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾರ ಶೆಟ್ಟಿ ನೇತ್ರತ್ವದಲ್ಲಿ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮತ ಎಣಿಕೆ ಕಾರ್ಯ ನಡೆದಿತ್ತು. ಫಲಿತಾಂಶ ಪ್ರಕಟವಾಗುತ್ತಿದಂತೆ ಮತ ಎಣಿಕೆ ಕೇಂದ್ರದ ಹೊರ ಭಾಗದಲ್ಲಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮುಂತಾದವರಿದ್ದರು.
ಚುನಾಯಿತ ಸದಸ್ಯರು:
-೧ನೇ ಕ್ಷೇತ್ರದಲ್ಲಿ ರಾಜ್ ಕಿರಣ ಜಿ., ಬೈರು ಬಸವ ಖಾರ್ವಿ, ಅಂಬಿಕಾ ಖಾರ್ವಿ, ನಾಗರಾಜ ಹಾಗೂ ರೇಖಾ. ೨ನೇ ಕ್ಷೇತ್ರದಲ್ಲಿ ನಸೀಮಾ ಬಾನು, ವಿಲ್ಮಾ ಮೆಂಡೋನ್ಸ್, ತಬ್ರೇಜ್ ಹಾಗೂ ಖಲೀಲ್. ೩ನೇ ಕ್ಷೇತ್ರದಲ್ಲಿ ನಾಗರಾಜ ಖಾರ್ವಿ, ಪ್ರೇಮಾ ಸಿ.ಎಸ್., ಸಾವಿತ್ರಿ ಖಾರ್ವಿ ಹಾಗೂ ಬಿ. ರಾಘವೇಂದ್ರ ಪೈ. ೪ನೇ ಕ್ಷೇತ್ರದಲ್ಲಿ ರಲ್ಲಿ ಅಮ್ಮು ಮೊಗೇರ್ತಿ, ನಿರ್ಮಲಾ ಆರ್., ಬಿ. ಗಣೇಶ ಶೆಣೈ ಹಾಗೂ ದೇವು ಜಯ ಗಳಿಸಿದ್ದಾರೆ.
-೫ನೇ ಕ್ಷೇತ್ರದಲ್ಲಿ ಕಮಲ, ಮಂತಿ ಶ್ರೀನಿವಾಸ ಖಾರ್ವಿ, ಲತಾ ಖಾರ್ವಿ ಹಾಗೂ ಅರುಣ್ ಪೂಜಾರಿ. -೬ನೇ ಕ್ಷೇತ್ರದಲ್ಲಿ ಅಕ್ಕಮ್ಮ ಯು.ಕೆ, ಜಯಂತಿ ಖಾರ್ವಿ, ಲಕ್ಷ್ಮಿಕಾಂತ ಮಡಿವಾಳ, ಶೇಖ್ ಪರ್ವಿನ್ಹಾಗೂ ಪ್ರಶಾಂತ ಖಾರ್ವಿ. ೭ನೇ ಕ್ಷೇತ್ರದಲ್ಲಿ ಜಯಂತಿ ಕಾನೋಜಿ, ಸಖು ಖಾರ್ವಿ ಹಾಗೂ ಜಿ. ಕೇಶವ ಖಾರ್ವಿ. ೮ನೇ ಕ್ಷೇತ್ರದಲ್ಲಿ ಪಿ. ಶಾಂತಿ ಖಾರ್ವಿ, ಅಶೋಕ ಶೆಟ್ಟಿ, ಸುಮಿತಾ ಶೇರುಗಾರ್ ಹಾಗೂ ಶ್ರೀನಿವಾಸ ಖಾರ್ವಿಗೆಲುವು ಸಾಧಿಸಿದ್ದಾರೆ.