ನಿಟ್ಟೆ ಮಹಾವಿದ್ಯಾಲಯಕ್ಕೆ ಜಪಾನ್ ನೈಡೆಕ್ ಕಂಪೆನಿ ಪ್ರತಿನಿಧಿಗಳ ಭೇಟಿ

ನಿಟ್ಟೆ: ಜಪಾನ್ ಮೂಲದ ನೈಡೆಕ್ ಕಾರ್ಪೊರೇಶನ್‌ನ ಪ್ರತಿನಿಧಿಗಳು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ ಜ.೨೧ ರಂದು ಭೇಟಿನೀಡಿ ನಿಟ್ಟೆ ಸಂಸ್ಥೆಯಲ್ಲಿ ನೈಡೆಕ್ ವತಿಯಿಂದ ಒಂದು ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪಿಸುವ ಬಗೆಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್, ನಿಟ್ಟೆಯ ಇಂಟರ್‌ನ್ಯಾಷನಲ್ ಕೊಲ್ಯಾಬೊರೇಶನ್ ವಿಭಾಗದ ನಿರ್ದೇಶಕ ಹರಿಕೃಷ್ಣ ಭಟ್, ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್, ಸಹಪ್ರಾಧ್ಯಾಪಕ ಡಾ.ವೇಣೂಗೋಪಾಲ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ೪ ಮಂದಿ ವಿದ್ಯಾರ್ಥಿಗಳು ನೈಡೆಕ್ ಸಂಸ್ಥೆಯಲ್ಲಿ ಪ್ರಾಯೋಜಿತ ತರಬೇತಿಗೆ ಆಯ್ಕೆಯಾಗಿದ್ದು ಈ ಭೇಟಿಯ ಸಂದರ್ಭದಲ್ಲಿ ಅವರೊಂದಿಗೆ ಸಂಸ್ಥೆಯ ಪ್ರತಿನಿಧಿಗಳು ಸಮಾಲೋಚಿಸಿದರು .