ಬ್ರಹ್ಮಾವರ: ಕಚ್ಚೂರು ದೇವಸ್ಥಾನವನ್ನು ಶೈಕ್ಷಣಿಕ ಕೇಂದ್ರವಾಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಶಿಕ್ಷಣ ಸಂಸ್ಥೆ ಮಂಜೂರಾತಿಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ರವಿವಾರ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ವಾರ್ಷಿಕ ಉತ್ಸವ ಸಂದರ್ಭ ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ 10 ಎಕರೆ ಜಾಗ ಮಂಜೂರಿಗೆ ಪ್ರಯತ್ನಿಸುತ್ತೇನೆ.ಈ ಕುರಿತು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದ ಅಭಿವೃದ್ಧಿ:
ಬ್ರಹ್ಮವರ ಕಚ್ಚೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಕ್ಷಣ ಎರಡು ಕೋಟಿ ರೂ. ಮಂಜೂರು ಮಾಡುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಅವರು ಕ್ಷೇತ್ರದಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿ ಕ್ಷೇತ್ರಕ್ಕೆ ಬರುವ 4 ಕಿ.ಮೀ. ರಸ್ತೆಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಬಾರ್ಕೂರು ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಸದಾಶಿವ ಭಂಡಾರಿ ಸಕಲೇಶಪುರ, ದಯಾನಂದ ಕತ್ತಲಸಾರ್, ರಾಮಚಂದ್ರ ಮಿಜಾರು, ದಿವಾಕರ ಶೆಟ್ಟಿ, ಹರಿಶ್ಚಂದ್ರ ಕಲ್ಲಟ್ಟೆ, ಕೆ. ಗೋಪಾಲ್, ನಿತ್ಯಾನಂದ ನಾಯರಿ, ಸೀತಾರಾಮ ಕೊಂಚಾಡಿ, ರಮೇಶ್ ಭಟ್ ನಾಯರ್ ಬೆಟ್ಟು, ಜಯರಾಮ ಬಿ. ನಾಯ್ಕ್, ಗೋವಿಂದ ಮೋಗ್ರಾಲ್, ಸುರೇಖಾ ಸುಧೀರ್, ಶಶಿರೇಖಾ ಉದಯ ಕುಮಾರ್, ಪ್ರವೀಣ್ ಕುಮಾರ್ ಮೂಳೂರು, ವನಿತಾ ನಾರಾಯಣ, ದಾಸಪ್ಪ ಹಾರಾಡಿ, ಉಮೇಶ್ ಕುಮಾರ್, ಬಿ. ಭಾಸ್ಕರ್, ಭುಜಂಗ ಬಿ., ರಘುವೀರ್ ಸೂಟರ್ ಪೇಟೆ, ರಾಜೇಶ್ ಬಿ.ಯು., ಮೋಹನ್ ಪ್ರಸಾದ್, ಗೋಪಾಲ ಕೃಷ್ಣ ಸಾಲ್ಯಾನ್ ಉಪಸ್ಥಿತರಿದ್ದರು.