ಉಡುಪಿ: ಉಡುಪಿ ಮೀಡಿಯಾ ನೆಟ್ ವರ್ಕ್ ನ ಉಡುಪಿ XPRESS ಜಾಲತಾಣ ಪ್ರಸ್ತುತಿಯ ವಿಭಿನ್ನ ಪರಿಕಲ್ಪನೆಯ ಅದಮಾರು ಮಠದ ಪರ್ಯಾಯ ಮಹೋತ್ಸವದ ವಿಶೇಷ ಸಂಚಿಕೆ “ಸುರಸಿಂಧು” ವನ್ನು ಅದಮಾರು ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ಅದಮಾರು ಮಠದಲ್ಲಿ ಅನಾವರಣಗೊಳಿಸಿ ಉಡುಪಿ XPRESS ತಂಡಕ್ಕೆ ಶುಭಾಶೀರ್ವಾದ ನೀಡಿದರು.
ಈ ಸಂದರ್ಭದಲ್ಲಿ ಸಂಚಿಕೆಯ ಸಂಪಾದಕ ಪ್ರಸಾದ್ ಶೆಣೈ, ವ್ಯವಸ್ಥಾಪಕ ಸಂಪಾದಕ ಜೀವೇಂದ್ರ ಶೆಟ್ಟಿ, ಮಾರ್ಕೆಟಿಂಗ್ ವಿಭಾಗದ ಅಶೋಕ್ ಆಚಾರ್ಯ,ಅರುಣ್ ಕುಮಾರ್ ಕಾರ್ಕಳ, ರಾಮ್ ಅಜೆಕಾರು ಉಪಸ್ಥಿತರಿದ್ದರು.












