ನಟಿ ರಶ್ಮಿಕಾ ಮಂದಣ್ಣ ನಿವಾಸಕ್ಕೆ ಐಟಿ ದಾಳಿ: ಅಧಿಕಾರಿಗಳಿಂದ ವಿಚಾರಣೆ

ಕೊಡಗು: ನಟಿ ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ ವಿರಾಜಪೇಟೆಯ ಕುಕ್ಲೂರು ಗ್ರಾಮದ ನಿವಾಸಕ್ಕೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದು, ಪರಿಶೀಲನೆ ಮುಂದುವರೆದಿದೆ.

ವಿರಾಜಪೇಟೆಯ ನಿವಾಸಕ್ಕೆ ರಶ್ಮಿಕಾ ಮಂದಣ್ಣ ಅವರು ರಾತ್ರಿ ಆಗಮಿಸಿ, ಹತ್ತು ನಿಮಿಷ ವಿಶ್ರಾಂತಿ ಪಡೆದು ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ. 10  ಅಧಿಕಾರಿಗಳ ತಂಡ ಅವರ ವಿಚಾರಣೆಯನ್ನು ನಡೆಸಿದ್ದು, ರಶ್ಮಿಕಾ ಮಂದಣ್ಣ ಅವರ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲ ದಿನ ತಡರಾತ್ರಿಯಾದರೂ ಪರಿಶೀಲನೆ ಕಾರ್ಯ ಮುಂದುವರೆದಿದ್ದು, ರಾತ್ರಿ ಊಟವನ್ನು ಮನೆಗೆ ತರಿಸಿಕೊಂಡು ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಚೆನ್ನೈ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಅವರನ್ನು  ಅಧಿಕಾರಿಗಳ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಅವರು ಚೆನ್ನೈನಿಂದ ಹೊರಟು ರಾತ್ರಿ ವಿರಾಜಪೇಟೆಯ ನಿವಾಸಕ್ಕೆ ಆಗಮಿಸಿದರು.