ಕಾರ್ಕಳ: ಬಿ. ಸದಾಶಿವ ಆಚಾರ್ಯ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್: ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ: ಬಿ. ಸದಾಶಿವ ಆಚಾರ್ಯ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್  ಕಾರ್ಕಳ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶ್ವ ಬ್ರಾಹ್ಮಣ ಸಮಾಜದ, ಡಿಪ್ಲೋಮ, ಬಿ.ಇ. ಸ್ನಾತಕೋತ್ತರ ಮತ್ತು ಬಿ.ಎ.ಎಂ.ಎಸ್. ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸಮಾರಂಭವು ಗಂಗಮ್ಮ ಟವರ್ಸ್ ನಲ್ಲಿ  ಜರಗಿತು

ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾದ  ಬಿ. ಪ್ರಕಾಶ ಆಚಾರ್ಯ ಮತ್ತು  ಬಿ. ಸತೀಶ್ ಆಚಾರ್ಯ ವಿದ್ಯಾರ್ಥಿ ವೇತನವನ್ನು ನೀಡಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ  ಪಿ. ವಸಂತ ಆಚಾರ್ಯ ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಎಮ್. ಚಂದ್ರಶೇಖರ ಆಚಾರ್ಯ ಮಾತಾನಾಡಿ, ಛಲ ಮತ್ತು ಪರಿಶ್ರಮ ಇದ್ದರೆ ಯಶಸ್ಸು ನಮ್ಮ ಬೆನ್ನತ್ತಿ ಬರುತ್ತದೆ ಎಂದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಮ್ಯಾನೇಜರ್ ಕೆ.ಸತೀಶ ಆಚಾರ್ಯ ವಂದಿಸಿದರು.