ಸಾಣೂರು ಯುವಕ‌ ಮಂಡಲದ ವತಿಯಿಂದ ಶೌಚಾಲಯ ಕೊಡುಗೆ

ಕಾರ್ಕಳ: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಇದರ ಯುವ ಆದರ್ಶ ಗ್ರಾಮ ವಿಕಾಸ ಯೋಜನೆ ಅಂಗವಾಗಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಸನ್ನಿಧಿ ಗುರುಬೆಟ್ಟು ಇಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯುವಕ ಮಂಡಲ ರಿ‌‌‌. ಸಾಣೂರು ಕೊಡುಗೆಯಾಗಿ ರಚಿಸಿದ ಸಾರ್ವಜನಿಕ ಶೌಚಾಲಯದ ಸಮರ್ಪಣಾ ಕಾರ್ಯಕ್ರಮವು ನೆಹರು ಯುವ ಕೇಂದ್ರದ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ಶ್ರೀ ವಿಲ್ಪೇಡ್ ಡಿ ಸೋಜ ಇವರ ಉಪಸ್ಥಿತಿಯಲ್ಲಿ ನೆರವೇರಿತು.
ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಸೇವಾ ಮನೋಭಾವದಿಂದ ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ತಿಳಿಸಿ ಮಂಡಲದ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.
ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸನ್ನಿಧಿಯ ದಯಾನಂದ ಸ್ವಾಮೀಜಿ, ಸಾಣೂರು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ನರಸಿಂಹ ಕಾಮತ್ ಕಾರ್ಕಳ ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ಸೂಡ ಮಂಡಲದ ಅಧ್ಯಕ್ಷ ಪ್ರಕಾಶ್ ಮಡಿವಾಳ, ಮಾಜಿ ಅಧ್ಯಕರಾದ ಪ್ರವೀಣ್ ಶೆಟ್ಟಿ, ಮಹೇಶ್ ಕುಮಾರ್, ಜಗದೀಶ್ ಕುಮಾರ್ ಮಂಡಲದ ಸದಸ್ಯರಾದ ರಾಜೇಶ್ ಪೂಜಾರಿ, ಶುಭಕರ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಪ್ರಸನ್ನ ಆಚಾರ್ಯ, ಕಿರಣ್ ಕುಲಾಲ್, ರಾಘವೇಂದ್ರ ಕುಲಾಲ್, ಶಂಕರ್ ಕುಲಾಲ್
ಆರ್ ಕೆ. ರಂಜೀತ್ ಸ್ಥಳೀಯ ಪ್ರಮುಖರು ಹಾಜರಿದ್ದರು.
ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ  ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.