ಡ್ರೀಮ್ ಕ್ಯಾಚರ್ಸ್ ವತಿಯಿಂದ ಮ್ಯಾಂಗಲೋರ್ಸ್ ಗಾಟ್ ಟ್ಯಾಲೆಂಟ್ ಜೂನಿಯರ್ ಎಡಿಶನ್ ಸೀಸನ್-1 ಉದ್ಘಾಟನೆ

ಮಂಗಳೂರು: ಡ್ರೀಮ್ ಕ್ಯಾಚರ್ಸ್ ಸ್ ಸಂಸ್ಥೆಯ ವತಿಯಿಂದ ಮ್ಯಾಂಗಲೋರ್‍ಸ್ ಗಾಟ್ ಟ್ಯಾಲೆಂಟ್ ಜೂನಿಯರ್ ಎಡಿಶನ್ ಸೀಸನ್-1  ಕಾರ್ಯಕ್ರಮವನ್ನು ಮಂಗಳೂರಿನ ಭಾರತ್ ಮಾಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಖ್ಯಾತ ಕೊರಿಯೋಗ್ರಾಫರ್‌ಗಳಾದ ಶುಭಕಿರಣ್ ಮಣಿ, ಸೂರಜ್ ಸನಿಲ್, ಹಿನ್ನೆಲೆ ಗಾಯಕಿ ಮಂಜುಶ್ರೀ ಹಾಗೂ ಡಾ.ಶ್ವೇತಾ ಕಾಮತ್ ಅವರು  ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡ್ರೀಮ್ ಕ್ಯಾಚರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪೃಥ್ವಿ ಗಣೇಶ್, ಡ್ರೀಮ್ ಕ್ಯಾಚರ್‍ಸ್ ಸಂಸ್ಥೆಯು ಹಿಂದೆಯೂ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದು, ಯಶಸ್ವಿಯಾಗಿದೆ. ಅನೇಕ ಪ್ರತಿಭೆಗಳು ನಮ್ಮ ನಗರದಲ್ಲಿದ್ದಾರೆ ಅವರಿಗೆ ಉತ್ತಮವಾದ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರವನ್ನು ಮಾಡುತ್ತಿದ್ದೆವೆ ಎಂದರು.

ಕಾರ್ಯಕ್ರಮದಲ್ಲಿ  5೦ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸೆಕೆಂಡ್ ಇನ್ನಿಂಗ್ಸ್ ಎನ್ನುವ ಸಿನಿಯರ್‍ಸ್ ಕ್ಲಬ್‌ನ್ನು ರೂಪಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭವು ನಡೆಯಿತು. ಮಾಜಿ ಕೊರ್ಪೊರೇಟರ್ ರಂಗನಾಥ್ ಕಿಣಿ ಅವರು ಸೆಕೆಂಡ್ ಇನ್ನಿಂಗ್ಸ್ ಕ್ಲಬ್‌ನ್ನು ಉದ್ಘಾಟಿಸಿ ನೂತನ ಕ್ಲಬ್‌ಗೆ ಶುಭ ಹಾರೈಸಿದರು. ಸೆಕೆಂಡ್ ಇನ್ನಿಂಗ್ಸ್ ಕ್ಲಬ್‌ನ ರೂವಾರಿ ಗಣೇಶ್ ಕಾಮತ್ ಅವರು ಸೆಕೆಂಡ್ ಇನ್ನಿಂಗ್ಸ್ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ 2 ಎಕ್ರೆ  ತುಳುಚಿತ್ರ ಚಿತ್ರತಂಡ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಮಕ್ಕಳಿಂದ ವಿವಿಧ ಪ್ರತಿಭಾ ಪ್ರದರ್ಶನ ಅದ್ಧೂರಿಯಾಗಿ ಜರಗಿತು.