ಮಣಿಪಾಲ: ನ.23ರಿಂದ 28ರವರೆಗೆ ಉಸಿರಾಟದ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಣಿಪಾಲ: COPD ಜಾಗೃತಿ ಮಾಸದ ಅಂಗವಾಗಿ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸೆ ಹಾಗೂ ಕೌಮಾರಭೃತ್ಯ ವಿಭಾಗದ ವತಿಯಿಂದ ನವೆಂಬರ್ 23ರಿಂದ 28ರವರೆಗೆ ಉಸಿರಾಟದ ಕಾಯಿಲೆಗಳ ಕುರಿತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರವು ಉಡುಪಿ ಅಜ್ಜರಕಾಡಿನ ಮುನಿಯಾಲ್ ಆಯುರ್ವೇದ ಫ್ಯಾಮಿಲಿ ಕ್ಲಿನಿಕ್ ಹಾಗೂ ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲ್ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಉಚಿತ ಸಾಮಾನ್ಯ ಆರೋಗ್ಯ ತಪಾಸಣೆ, ಉಸಿರಾಟದ ಆರೋಗ್ಯ ತಪಾಸಣೆ, ದೀರ್ಘಕಾಲದ ಕೆಮ್ಮು, ಕಫ, ಉಸಿರಾಟದ ತೊಂದರೆ ಹಾಗೂ ಪುನರಾವರ್ತಿತ ಉಸಿರಾಟದ ಸೋಂಕುಗಳಿಗೆ ವೈದ್ಯಕೀಯ ಸಮಾಲೋಚನೆ ಮತ್ತು ಆರೋಗ್ಯ ಮಾರ್ಗದರ್ಶನ ನೀಡಲಾಗುವುದು. ಧೂಮಪಾನಿಗಳು, ಧೂಮಪಾನ ತ್ಯಜಿಸಿದವರು, ವಯೋವೃದ್ಧರು ಹಾಗೂ ಪದೇಪದೇ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಮತ್ತು ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬಹುದು.

ಶಿಬಿರವು ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ನಡೆಯಲಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯು ವಿನಂತಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 81234 03233. ಟೋಲ್ ಫ್ರೀ ಸಂಖ್ಯೆ: 1800 425 3178.