ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ 34ನೇ ಘಟಿಕೋತ್ಸವದ ಎರಡನೆಯ ದಿನದ ಸಮಾರಂಭದಲ್ಲಿ 44 ಪಿಎಚ್ಡಿ ಪದವೀಧರರು ಸೇರಿದಂತೆ ಒಟ್ಟು 1,416 ವಿದ್ಯಾರ್ಥಿಗಳಿಗೆ ಮಣಿಪಾಲದಲ್ಲಿ ಶುಕ್ರವಾರ ಪದವಿ ಪ್ರದಾನ ಮಾಡಲಾಯಿತು.
ವಿದ್ಯಾರ್ಥಿಗಳ ಸಾಧನೆ, ಕನಸುಗಳ ಅನಾವರಣಕ್ಕೆ ಈ ಸಮಾರಂಭ ವೇದಿಕೆಯಾಯಿತು.ಹಿತಾಚಿ ಸಿಸ್ಟಮ್ಸ್ ಇಂಡಿಯಾದ ನಿರ್ದೇಶಕ ಹಾಗೂ ಚೀಫ್ ಟ್ರಾನ್ಸ್ಫಾರ್ಮೇಶನ್ ಆಫೀಸರ್(ಸಿಟಿಆರ್ಒ) ಕೋಜಿತ್ಸುಬೋಟಾ ಅವರು ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಾಹೆ ಟ್ರಸ್ಟ್ನ ಟ್ರಸ್ಟಿ ಶ್ರೀಮತಿ ವಸಂತಿ ಆರ್.ಪೈ, ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿ ಡಾ. ಶರತ್ ಕೆ. ರಾವ್ ಅವರು ಉಪಸ್ಥಿತರಿದ್ದರು.
ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ, ಕೋಜಿ ತ್ಸುಬೋಟಾ ಅವರು, “ಬೆಳೆಯುತ್ತಿರುವ ಉದ್ಯೋಗ ಕ್ಷೇತ್ರದಲ್ಲಿಪದವೀಧರರಿಗೆ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸುವ ಕೌಶಲ ಇದ್ದರೆ ಸಾಲದು, ಅದು ನೀಡುವಫಲಿತಾಂಶಗಳನ್ನುಪರಿಶೀಲಿಸುವ ಜಾಣ್ಮೆಯು ಇರಬೇಕಾಗುತ್ತದೆ.
ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿ, ಅದರಿಂದಸರಿಯಾದ ಉಪಯೋಗ ಪಡೆಯುವುದು ಇಂದಿನ ಅಗತ್ಯ. ನಾವು ಕೇಳಿದ ಪ್ರಶ್ನೆಗಳಿಗೆಲ್ಲ ಎಐ ಉತ್ತರ ನೀಡುತ್ತದೆ. ಹೀಗಿರುವಾಗಅದಕ್ಕೆ ಸರಿಯಾದ ಪ್ರಶ್ನೆ ಕೇಳುವುದು ನಮ್ಮ ಬುದ್ದಿವಂತಿಕೆ ತೋರಿಸುತ್ತದೆ. ತಂತ್ರಜ್ಞಾನ ಎನ್ನುವುದು ಒಂದು ಸಾಧನ ಅಷ್ಟೇ. ,ಅದನ್ನು ಬಳಸುವಾಗ ಮಾನವೀಯತೆ ಮತ್ತು ಸರಿ-ತಪ್ಪಿನ ಅರಿವು ಮುಖ್ಯವಾಗಬೇಕು” ಎಂದು ಕಿವಿಮಾತು ಹೇಳಿದರು.
ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, ‘ಪದವೀಧರರ ಸಾಧನೆಯಷ್ಟೇ ಅವರ ಸಾಮಾಜಿಕ ಹೊಣೆಗಾರಿಕೆಯೂಮುಖ್ಯ. ಹೊಸ ಆಲೋಚನೆ, ಬದ್ಧತೆ ಮತ್ತು ನಿರಂತರ ಕಲಿಕೆಯ ಮೂಲಕ ವೃತ್ತಿಪರತೆ ಮತ್ತು ಸಾಮಾಜಿಕ ಜವಾಬ್ದಾರಿಯುಳ್ಳ ವ್ಯಕ್ತಿಗಳನ್ನು ರೂಪಿಸಲು ಮಾಹೆ ಶ್ರಮಿಸುತ್ತಿದೆ. ಪದವೀಧರರು ತಮ್ಮ ಕೌಶಲ ಮತ್ತು ಜ್ಞಾನವನ್ನು ಸಮಾಜದ ಒಳಿತಿಗೆಬಳಸಬೇಕು’ ಎಂದು ತಿಳಿಸಿದರು.
ನಿಶಾಲ್ ರಾಯ್ (ಬಿಎಸ್ಸಿ ನರ್ಸಿಂಗ್, ಎಂಕಾನ್ ಮಣಿಪಾಲ್) ಮತ್ತು ಮೊಹಮ್ಮದ್ ಸೈಫ್ ಝಿದಾನ್ ( ಮಾಸ್ಟರ್ ಆಫ್ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಪಿಎಸ್ಪಿಎಚ್ ಮಣಿಪಾಲ್) ಇವರಿಗೆ ತಮ್ಮ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಗಾಗಿಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಘಟಿಕೋತ್ಸವದ ಎರಡನೇ ದಿನವು ಪದವೀಧರರು, ಚಿನ್ನದ ಪದಕ ಪಡೆದವರು, ಹೆಮ್ಮೆಯ ಪೋಷಕರು ಹಾಗೂ ಅಧ್ಯಾಪಕರಸಂಭ್ರಮದ ಕ್ಷಣಗಳಿಗೆ ವೇದಿಕೆಯಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಕೊಂಡಾಡುವುದರೊಂದಿಗೆ, ಬದಲಾಗುತ್ತಿರುವಕಾಲಘಟ್ಟಕ್ಕೆ ತಕ್ಕಂತೆ ಯುವಪೀಳಿಗೆಯನ್ನು ಸಜ್ಜುಗೊಳಿಸುವ ಮಾಹೆಯ ದೃಢ ಸಂಕಲ್ಪವನ್ನು ಪುನರುಚ್ಚರಿಸಲಾಯಿತು.















