ನವೆಂಬರ್-ಡಿಸೆಂಬರ್ ದೇಶದೆಲ್ಲೆಡೆ ಮದುವೆಗಳದ್ದೇ ಅಬ್ಬರ: 25 ದಿನಗಳಲ್ಲಿ 52 ಲಕ್ಷ ಮದುವೆ; ₹7.5 ಲಕ್ಷ ಕೋಟಿ ವಹಿವಾಟಿನ ನಿರೀಕ್ಷೆ

ನವದೆಹಲಿ: ದೇಶಾದ್ಯಂತ ನವೆಂಬರ್ 21ರಿಂದ ಡಿಸೆಂಬರ್ 15ರವರೆಗೆ ಅಂದಾಜು 52 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ಈ ಮೂಲಕ ಸುಮಾರು ₹7.5 ಲಕ್ಷ ಕೋಟಿ ವಹಿವಾಟು ನಡೆಯಲಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (CAIT) ತಿಳಿಸಿದೆ.

ಈ 25 ದಿನಗಳ ಮದುವೆ ಋತುವಿನಲ್ಲಿ ಪ್ರತಿದಿನ ಸರಾಸರಿ 2 ಲಕ್ಷಕ್ಕೂ ಅಧಿಕ ಮದುವೆಗಳು ನಡೆಯುವ ಅಂದಾಜಿದೆ. ಇದರಿಂದ ಚಿಲ್ಲರೆ ವ್ಯಾಪಾರ, ಉತ್ಪಾದನೆ, ಆತಿಥ್ಯ, ಸಾರಿಗೆ, ಆಹಾರ, ಆಭರಣ ಸೇರಿದಂತೆ ವಿವಿಧ ವಲಯಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ.

ದೆಹಲಿ-ಎನ್‌ಸಿಆರ್ ಪ್ರದೇಶವೊಂದರಲ್ಲೇ ಸುಮಾರು 5 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ₹2.5 ಲಕ್ಷ ಕೋಟಿ ವಹಿವಾಟು ನಡೆಯುವ ಅಂದಾಜಿದೆ. ಒಟ್ಟು ವಹಿವಾಟಿನಲ್ಲಿ ಸರಕು ಮತ್ತು ಚಿಲ್ಲರೆ ಖರೀದಿಗೆ ₹4.05 ಲಕ್ಷ ಕೋಟಿ ಹಾಗೂ ವಿವಿಧ ಸೇವೆಗಳಿಗೆ ₹3.45 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಸಿಎಐಟಿ ತಿಳಿಸಿದೆ.

ದೇಶದ 25 ರಾಜ್ಯಗಳ 300ಕ್ಕೂ ಹೆಚ್ಚು ಪ್ರಮುಖ ವ್ಯಾಪಾರಿಗಳು ಹಾಗೂ 550 ವ್ಯಾಪಾರ ಸಂಘಗಳೊಂದಿಗೆ ಸಮಾಲೋಚನೆ ನಡೆಸಿ ಸಿಎಐಟಿಯ ಸಂಶೋಧನಾ ವಿಭಾಗ ಈ ಅಂದಾಜು ಸಿದ್ಧಪಡಿಸಿದೆ. ಮದುವೆ ಋತುವಿನಲ್ಲಿ ಕ್ಯಾಟರಿಂಗ್, ಅಲಂಕಾರ, ಫೋಟೋಗ್ರಫಿ, ಆತಿಥ್ಯ, ಸಾರಿಗೆ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 1.25 ಕೋಟಿ ತಾತ್ಕಾಲಿಕ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಕಳೆದ ವರ್ಷಗಳ ಮದುವೆ ಮತ್ತು ವಹಿವಾಟಿನ ಅಂದಾಜು

ವರ್ಷಮದುವೆಗಳ ಸಂಖ್ಯೆವಹಿವಾಟು
202232 ಲಕ್ಷ₹3.7 ಲಕ್ಷ ಕೋಟಿ
202338 ಲಕ್ಷ₹4.74 ಲಕ್ಷ ಕೋಟಿ
202448 ಲಕ್ಷ₹5.90 ಲಕ್ಷ ಕೋಟಿ
202546 ಲಕ್ಷ₹6.50 ಲಕ್ಷ ಕೋಟಿ