ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಹೊರೆ ವಿಧಿಸಿದೆ. ನಂದಿನಿ ಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಇದೀಗ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಲಗೇಜ್ ಸಾಗಣೆ ಶುಲ್ಕವನ್ನೂ ಹೆಚ್ಚಿಸಲಾಗಿದೆ.
ಕೆಎಸ್ಆರ್ಟಿಸಿಯ ನಾಲ್ಕು ಸಾರಿಗೆ ನಿಗಮಗಳು ಹಾಗೂ ನಗರ ಸಾರಿಗೆ ಬಸ್ಗಳ ಟಿಕೆಟ್ ದರ ಏರಿಕೆ ಮಾಡಿದ ಬೆನ್ನಲ್ಲೇ ಲಗೇಜ್ ಸಾಗಣೆ ದರವನ್ನೂ ಪರಿಷ್ಕರಿಸಲಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದ್ದು, ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸಬೇಕಾಗಿದೆ.
ಪ್ರಯಾಣಿಕರಿಗೆ 10 ಕೆ.ಜಿ.ವರೆಗಿನ ಲಗೇಜ್ ಅನ್ನು ಉಚಿತವಾಗಿ ಸಾಗಿಸಲು ಅವಕಾಶವಿದೆ. ಇದರ ಜೊತೆಗೆ 20 ಕೆ.ಜಿ.ವರೆಗಿನ ಕೆಲವು ಭಾರವಾದ ಸಾಮಗ್ರಿಗಳ ಸಾಗಣೆಗೂ ಉಚಿತ ವಿನಾಯಿತಿ ನೀಡಲಾಗಿದೆ. ಆದರೆ ನಿಗದಿತ ಮಿತಿಗಿಂತ ಹೆಚ್ಚಿನ ತೂಕದ ಲಗೇಜ್ ಸಾಗಣೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಪರಿಷ್ಕೃತ ಲಗೇಜ್ ಸಾಗಣೆ ದರ ಹೀಗಿದೆ:
| ಪ್ರಯಾಣದ ಹಂತಗಳು | ಹಳೆಯ ದರ | ಹೊಸ ದರ |
|---|---|---|
| ಮೊದಲ 5 ಸ್ಟೇಜ್ | ₹6 | ₹10 |
| 6ರಿಂದ 10 ಸ್ಟೇಜ್ | ₹10 | ₹15 |
| 11ರಿಂದ 15 ಸ್ಟೇಜ್ | ₹20 | ₹25 |
ದರ ಏರಿಕೆಯಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹೆಚ್ಚಿನ ಪ್ರಮಾಣದ ಲಗೇಜ್ ಸಾಗಿಸುವ ಪ್ರಯಾಣಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.















