ಕಟಪಾಡಿಯಲ್ಲಿ ಅ.30ರಂದು ‘ನಿಸರ್ಗ ಫ್ರೆಶ್’ ಕೋಲ್ಡ್ ಪ್ರೆಸ್ಡ್ ಆಯಿಲ್ ಮಿಲ್ ಫ್ಯಾಕ್ಟರಿ ಔಟ್ಲೆಟ್ ಉದ್ಘಾಟನೆ

ಕಟಪಾಡಿ: ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಿಸರ್ಗ ಫ್ರೆಶ್ ಆಯಿಲ್ಸ್ ಆ್ಯಂಡ್ ಸ್ಪೈಸಸ್ ಸಂಸ್ಥೆಯ ‘ನಿಸರ್ಗ ಫ್ರೆಶ್ ಕೋಲ್ಡ್ ಪ್ರೆಸ್ಡ್ ಆಯಿಲ್ ಮಿಲ್ ಫ್ಯಾಕ್ಟರಿ ಔಟ್ಲೆಟ್’ ಅ.30ರಂದು ಶುಕ್ರವಾರ ಉದ್ಘಾಟನೆಗೊಳ್ಳಲಿದೆ.

ಕಟಪಾಡಿಯ ಓಲ್ಡ್ ರೋಡ್ನಲ್ಲಿರುವ ಇಮೇಜ್ ಪ್ಯಾಲೇಸ್ನ ನೆಲಮಹಡಿಯಲ್ಲಿ ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಜೆಸಿಐ ಕಟಪಾಡಿಯ ಮಾಜಿ ಅಧ್ಯಕ್ಷ ಡಾ. ಉದಯ್ ಕುಮಾರ್ ಶೆಟ್ಟಿ ಅವರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಸಂಚಾಲಕ ಸತ್ಯೇಂದ್ರ ಪೈ, ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಕಟಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ರಾವ್, ಶ್ರೀ ಕ್ಷೇತ್ರ ಪೇಟೆಬೆಟ್ಟುವಿನ ಅಧ್ಯಕ್ಷ ಹರಿಶ್ಚಂದ್ರ ಪಿಲಾರ್, ಶ್ರೀ ವಿಶ್ವನಾಥ ಕ್ಷೇತ್ರದ ಮಾಜಿ ಅಧ್ಯಕ್ಷ ದಯಾನಂದ ವಿ. ಬಂಗೇರ ಹಾಗೂ ಶ್ರೀ ನಾಗಬ್ರಹ್ಮಸ್ಥಾನ ತೌಡಬೆಟ್ಟು ಇದರ ಅಧ್ಯಕ್ಷ ಯಶವಂತ್ ಸೊಮಯ್ಯ ಪೂಜಾರಿ ಭಾಗವಹಿಸಲಿದ್ದಾರೆ.