ಮಣಿಪಾಲದ  MSDCಯಲ್ಲಿ ಹೇರ್ ಟ್ರೈನರ್ ಹುದ್ದೆಗೆ ನೇಮಕಾತಿ: ಆಸಕ್ತರು ಮಿಸ್ ಮಾಡದೇ ಅರ್ಜಿ ಸಲ್ಲಿಸಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ (MSDC) ಹಾಗೂ Orane International ಸ್ಕೂಲ್ ಆಫ್ ಬ್ಯೂಟಿ ಆ್ಯಂಡ್ ವೆಲ್‌ನೆಸ್ ವತಿಯಿಂದ ಹೇರ್ ಟ್ರೈನರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಸಲೂನ್ ಮತ್ತು ಬ್ಯೂಟಿ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಹೊಂದಿರುವ ಪುರುಷರು ಹಾಗೂ ಮಹಿಳೆಯರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೂದಲು ವಿನ್ಯಾಸ ಮತ್ತು ಆರೈಕೆಯ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಆಸಕ್ತಿ, ಉತ್ತಮ ಸಂವಹನ ಕೌಶಲ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ತಾಳ್ಮೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬ್ಯೂಟಿ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸಲು ಹಾಗೂ ತಮ್ಮ ಅನುಭವ ಮತ್ತು ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಅವಕಾಶವಿದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9591427761 ಸಂಖ್ಯೆಯನ್ನು ಸಂಪರ್ಕಿಸಬಹುದು. ಸಂಸ್ಥೆಯ ವೆಬ್‌ಸೈಟ್: msdcskills.org/beauty-wellness/. ಇನ್‌ಸ್ಟಾಗ್ರಾಮ್: @oranemsdc_manipal.