ನವದೆಹಲಿ: ಎಕ್ಸ್ಪ್ರೆಸ್ವೇಗಳಲ್ಲಿ ವಾಹನಗಳ ವೇಗದ ಮಿತಿ ಹಾಗೂ ಸಂಚಾರ ನಿಯಮಗಳ ಜಾರಿ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಹೇಳಿಕೆ ಗಮನ ಸೆಳೆದಿದೆ. ನಿಗದಿತ ವೇಗದ ಮಿತಿಗಿಂತ ಶೇ. 20ರಷ್ಟು ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳಿಗೂ ರಿಯಾಯಿತಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಹೆದ್ದಾರಿಗಳಲ್ಲಿ ವೇಗದ ಕಾರಣಕ್ಕೆ ವಾಹನ ಸವಾರರಿಗೆ ನೋಟಿಸ್ಗಳು ತಲುಪುತ್ತಿರುವುದನ್ನು ಪ್ರಸ್ತಾಪಿಸಿದರು. 120 ಕಿ.ಮೀ. ವೇಗದವರೆಗೆ ನೋಟಿಸ್ ಕಳುಹಿಸಬಾರದು ಹಾಗೂ ನಿಗದಿತ ವೇಗದ ಮಿತಿಗಿಂತ ಶೇ. 20ರಷ್ಟು ಹೆಚ್ಚುವರಿ ವೇಗದಲ್ಲಿದ್ದರೂ ರಿಯಾಯಿತಿ ನೀಡಬೇಕು. ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವವರಿಗೆ ಮಾತ್ರ ಚಲನ್ ವಿಧಿಸಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.
ಈ ಹೇಳಿಕೆಯಿಂದ ಎಕ್ಸ್ಪ್ರೆಸ್ವೇಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ವೇಗದ ಮಿತಿ ಉಲ್ಲಂಘನೆಗೆ ಸಂಬಂಧಿಸಿದ ನಿಯಮಗಳ ಕುರಿತು ಕುತೂಹಲ ಮೂಡಿದೆ. ಆದರೆ, ಈ ರಿಯಾಯಿತಿ ಎಲ್ಲ ಎಕ್ಸ್ಪ್ರೆಸ್ವೇಗಳಿಗೂ ಅನ್ವಯವಾಗುತ್ತದೆಯೇ ಮತ್ತು ಅಧಿಕೃತವಾಗಿ ಜಾರಿಗೆ ಬಂದಿದೆಯೇ ಎಂಬುದನ್ನು ಸಂಬಂಧಪಟ್ಟ ಇಲಾಖೆಯ ಅಧಿಕೃತ ಪ್ರಕಟಣೆ ಬಂದ ಬಳಿಕವಷ್ಟೇ ಖಚಿತವಾಗಲಿದೆ.















