Puneeth Rajkumar: ಅಪ್ಪು ಇಲ್ಲದೆ ಐದು ವರ್ಷ; ಅಭಿಮಾನಿಗಳ ಮನದಲ್ಲಿ ಪುನೀತ್ ಶಾಶ್ವತ

ಅಪ್ಪು (Appu) ಇಲ್ಲದೆ ಐದು ವರ್ಷಗಳೇ ಕಳೆದು ಹೋಗಿವೆ. 2021 ಅಕ್ಟೋಬರ್-29 ರಂದು ಪುನೀತ್ (Puneeth) ಎಲ್ಲರನ್ನೂ ಬಿಟ್ಟು ಹೋದ್ರು. ಆದರೆ, ಈ ಸಾವು ನ್ಯಾಯವೇ ಅಂತ ಕೇಳಿದವರೇ ಹೆಚ್ಚು. ಪುನೀತ್ ಇಲ್ಲದೆ ಈ ಐದು ವರ್ಷದಲ್ಲಿ ಅಭಿಮಾನಿಗಳು (Fans) ಒಂದೇ ಒಂದು ದಿನವೂ ಪುನೀತ್ ನೆನಪಿಸಿಕೊಳ್ಳದೇ ಇರೋ ದಿನವೇ ಇಲ್ಲ. ಅಷ್ಟೊಂದು ಮನದಲ್ಲಿ ಆಳವಾಗಿಯೇ ಉಳಿದು ಹೋದ ಪುನೀತ್ ಅವರ ಐದನೇ ಪುಣ್ಯ ಸ್ಮರಣೆ (5th Death Anniversary) ದಿನ ಆ್ಯಂಕರ್ ಅನುಶ್ರೀ ಒಂದು ಪೋಸ್ಟ್ ಹಾಕಿದ್ದಾರೆ. ಅಪ್ಪು ನಿಧನದ ಆ ಕರಾಳ ದಿನದ ವಿಡಿಯೋವನ್ನು ಸುದ್ದಿ ಮನೆ ಯುಟ್ಯೂಬ್ ಚಾನೆಲ್ ಹಂಚಿಕೊಂಡಿದೆ.

ಪುನೀತ್ ಇಲ್ಲದ ಐದು ವರ್ಷ

ಪುನೀತ್ ಇಲ್ಲದ ಐದು ವರ್ಷದಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ, ಪುನೀತ್ ಅವರನ್ನ ನೆನೆಯೋ ಕೆಲಸ ಆಗ್ತಾನೇ ಇದೆ. ಪುನೀತ್ ಅವರನ್ನ ನೆನಪಿಸಿಕೊಂಡೇ ಹೊಸ ಚಿತ್ರಗಳು ಶುರು ಆಗಿವೆ.