ದಸರಾದಲ್ಲಿ ನಡೆದ ಕೆಲ ವಿಚಾರಗಳ ಬಗ್ಗೆ ಪ್ರಮೋದಾದೇವಿ ಒಡೆಯರ್ ಅವರು ಸುದೀರ್ಘ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತಾಡಿದ ಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ಉತ್ತರ ನೀಡಿದ್ದಾರೆ.
ಬೆಳಗಾವಿ (ಅ.27): ಈ ಬಾರಿಯ ನಾಡಹಬ್ಬ ದಸರಾ ಆಯೋಜನೆಯಲ್ಲಿ ನಡೆದ ಕೆಲ ಘಟನೆ ಹಾಗೂ ವಿಚಾರಗಳ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಅಸಮಾಧಾನ ಹೊರಹಾಕಿ ಸರ್ಕಾರಕ್ಕೆ ಪತ್ರ ಬರೆದಿದ್ರು. ಈ ಬಗ್ಗೆ ಬೆಳಗಾವಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ನನಗೆ ಇತಿಹಾಸ ಗೊತ್ತಿಲ್ಲ ಮೊದಲಿನ ಪರಂಪರೆ ಏನಿತ್ತು ಅದನ್ನೇ ಮಾಡಿದ್ದೇವೆ ಎಂದಿದ್ದಾರೆ. ಅಲ್ಲದೇ ಈಗ ಪ್ರಜಾಪ್ರಭುತ್ವ ಬಂದಿದೆ ಪ್ರಜಾಪ್ರಭುತ್ವ ಇಲ್ಲದಿದ್ರೇ ನಡೀತಿತ್ತು. ಆದ್ರೆ ಈಗ ಅದೆಲ್ಲಾ ಆಗಲ್ಲ ಎಂದು ಖಡಕ್ ಆಗಿಯೇ ಡಿಕೆಶಿ ಉತ್ತರ ನೀಡಿದ್ದಾರೆ.
ಪ್ರಮೋದಾದೇವಿ ಬೇಸರ, ಸಿಎಂ ಡಿಕೆಶಿ ರಿಯಾಕ್ಷನ್
2026ರ ದಸರಾ ಆಚರಣೆಯ ಸಂದರ್ಭದಲ್ಲಿ ನಡೆದ ಕೆಲವು ಭದ್ರತಾ ಲೋಪಗಳು, ಅಧಿಕಾರಿಗಳ ವರ್ತನೆ ಮತ್ತು ಸಾಂಪ್ರದಾಯಿಕ ಆಚರಣೆಗಳಿಗೆ ಉಂಟಾದ ಅಡಚಣೆಗಳ ಕುರಿತು ಪ್ರಮೋದಾದೇವಿ ಒಡೆಯರ್ ಅವರು ಸುದೀರ್ಘ ಪತ್ರ ಬರೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತಾಡಿದ ಸಿಎಂ ಡಿಕೆ ಶಿವಕುಮಾರ್ ಅವ್ರು, ನಾನು ಪ್ರಮೋದಾದೇವಿ ಅವರ ಹೇಳಿಕೆ ನೋಡಿಲ್ಲ. ಮೊದಲಿನಿಂದಲೂ ಪರಂಪರೆ ಇದೆ. ರಾಜ ಮನೆತನಕ್ಕೆ ಏನೆಲ್ಲಾ ಗೌರವ ಕೊಡಬೇಕು ಅದೇ ರೀತಿ ಮಾಡಿದ್ದೇವೆ. ಅವರು ಏನು ಹೇಳಿಕೆ ನೀಡಿದ್ದಾರೆ ಎಂದ ಗಮನಿಸಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಇದು ಯಾರ ವೈಯಕ್ತಿಕ ವಿಚಾರ ಅಲ್ಲ
ದಸರಾ ಹಬ್ಬ ನನ್ನ ವೈಯಕ್ತಿಕ ವಿಚಾರ ಅಲ್ಲ, ಹಾಗೇ ಪ್ರಮೋದಾದೇವಿ ಅವರ ವೈಯಕ್ತಿಕ ವಿಚಾರವೂ ಅಲ್ಲ, ಇಡೀ ರಾಜ್ಯದ ವಿಚಾರ. ಆನೆ ವಿಚಾರದಲ್ಲಿ ನನ್ನ ಮಾತು ಕೇಳಲಿಲ್ಲ ಅನ್ನೋದು ಅಲ್ಲ. ಹೊಸ ಆನೆ ಪ್ರಶಾಂತ ಮೇಲೆ ಅಂಬಾರಿ ಇರಿಸಿ ಪದ್ಧತಿಯಂತೆಯೇ ಈ ಬಾರಿ ದಸರಾ ನಡೆಸಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
‘ಇದು ಡಿಕೆಶಿ ಕಾರ್ಯಕ್ರಮ ಅಲ್ಲ, ಸರ್ಕಾರದ ದಸರಾ’
ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸಿದ್ದೇವೆ. ಸಚಿವರು ಬಂದು ತಮಗೆ ವಹಿಸಿದ ಕೆಲಸ ಮಾಡಿದ್ದಾರೆ. ದಸರಾ ನಾಡಿನ ಹಬ್ಬ ನಾಡಿನ ದೇವತೆಗೆ ಗೌರವ ಕೊಡಬೇಕು. ಕಾರ್ಯಕ್ರಮಕ್ಕೆ ಕೊಪ್ಪಳದ ಸ್ವಾಮೀಜಿಗಳು ಬಂದ್ರೂ. ಇದೆಲ್ಲವನ್ನ ಒಬ್ಬರೇ ಮಾಡಲು ಆಗಲ್ಲ. ಇದು ಸರ್ಕಾರದ ಕಾರ್ಯಕ್ರಮವೇ ಹೊರತು ಡಿಕೆಶಿ ಕಾರ್ಯಕ್ರಮ ಅಲ್ಲ. ನಮ್ಮದು ತಪ್ಪಿದ್ರೆ ತಿದ್ದುಕೊಳ್ಳುತ್ತೇವೆ ಬಿಡಿ ಎಂದ್ರು ಡಿಕೆಶಿ.















