ಉಡುಪಿಯ ಬಲ್ಲಾಳ್ ಮೊಬೈಲ್ಸ್‌ನಲ್ಲಿದೆ ಮೆಗಾ ಫೆಸ್ಟಿವಲ್ ಆಫರ್ಸ್, ರೂ. 25 ಲಕ್ಷಕ್ಕೂ ಅಧಿಕ ಮೌಲ್ಯದ ಬಹುಮಾನ ಗೆಲ್ಲಬೇಕಾ? ಹಾಗಾದ್ರೆ ಈ ಅವಕಾಶ ಮಿಸ್ ಮಾಡ್ಬೇಡಿ

ಉಡುಪಿ: ಹಬ್ಬದ ಸಂಭ್ರಮಕ್ಕೆ ಶಾಪಿಂಗ್‌ನ ಖುಷಿ, ಖರೀದಿಗೆ ಭರ್ಜರಿ ಬಹುಮಾನಗಳ ಆಕರ್ಷಣೆ! ಉಡುಪಿಯ ಜನಪ್ರಿಯ ಬಲ್ಲಾಳ್ ಮೊಬೈಲ್ಸ್ ಸಂಸ್ಥೆಯು ಗ್ರಾಹಕರಿಗಾಗಿ ‘ಮೆಗಾ ಫೆಸ್ಟಿವಲ್ ಆಫರ್ಸ್’ ಅಭಿಯಾನವನ್ನು ಆರಂಭಿಸಿದ್ದು, ₹25 ಲಕ್ಷಕ್ಕೂ ಅಧಿಕ ಮೌಲ್ಯದ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಿದೆ. ಈ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಅ. 12ರಂದು ನಡೆಯಿತು.

Shop More, Win More – ಹೆಚ್ಚು ಖರೀದಿಸಿ, ಹೆಚ್ಚಿನದನ್ನು ಗೆಲ್ಲಿರಿ!

ಅಕ್ಟೋಬರ್ 10ರಿಂದ ಜನವರಿ 14ರವರೆಗೆ ನಡೆಯುವ ಈ ವಿಶೇಷ ಅಭಿಯಾನದಲ್ಲಿ ಗ್ರಾಹಕರು ಮೊಬೈಲ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲಬಹುದು. 11 ಬೈಕ್‌ಗಳು, 50 UHD ಟಿವಿಗಳು, ಐಫೋನ್‌ಗಳು, 50 ವಾಷಿಂಗ್ ಮೆಷಿನ್‌ಗಳು, ಗೋಪ್ರೊ ಕ್ಯಾಮೆರಾಗಳು ಹಾಗೂ ಜೆಬಿಎಲ್ ಹೋಮ್ ಥಿಯೇಟರ್ ಸಿಸ್ಟಮ್‌ಗಳು ಸೇರಿದಂತೆ ಹಲವು ಆಕರ್ಷಕ ಬಹುಮಾನಗಳು ಗ್ರಾಹಕರಿಗಾಗಿ ಕಾಯುತ್ತಿವೆ.

ಇಷ್ಟೇ ಅಲ್ಲ, ಪ್ರತಿ ಖರೀದಿಗೂ ಖಚಿತ ಉಚಿತ ಉಡುಗೊರೆ ನೀಡಲಾಗುತ್ತಿದ್ದು, ಗ್ರಾಹಕರ ಶಾಪಿಂಗ್ ಅನುಭವವನ್ನು ಮತ್ತಷ್ಟು ವಿಶೇಷವಾಗಿಸಲಿದೆ.

ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳಿಗೂ ವಿಶೇಷ ಉಡುಗೊರೆ!

ಬಲ್ಲಾಳ್ ಮೊಬೈಲ್ಸ್‌ನ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳಿಗಾಗಿ ಐದು ಸಮಾಧಾನಕರ ಬಹುಮಾನಗಳನ್ನು ಘೋಷಿಸಲಾಗಿದೆ. ಬೆಳ್ಳಿ ನಾಣ್ಯ, ಏರ್ ಫ್ರೈಯರ್, ಮೊಬೈಲ್ ಗಿಂಬಲ್, ಟ್ರಾಲಿ ಬ್ಯಾಗ್ ಹಾಗೂ ಮಿಕ್ಸರ್ ಗ್ರೈಂಡರ್ ಗೆಲ್ಲುವ ಅವಕಾಶವೂ ಇದೆ.

ನಿಮ್ಮ ಹಬ್ಬದ ಶಾಪಿಂಗ್‌ಗೆ ಬಂಪರ್ ಕೊಡುಗೆಗಳ ಸಾಥ್!

ಹಬ್ಬದ ಖರೀದಿಯ ಜೊತೆಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಗ್ರಾಹಕರು ಉಡುಪಿಯ ಕಲ್ಪನಾ ಥಿಯೇಟರ್ ಎದುರಿನ ಓರಿಯನ್ ಬಿಲ್ಡಿಂಗ್‌ನಲ್ಲಿರುವ ಬಲ್ಲಾಳ್ ಮೊಬೈಲ್ಸ್ ಮಳಿಗೆಗೆ ಭೇಟಿ ನೀಡಿ ಈ ಅಭಿಯಾನದ ಪ್ರಯೋಜನ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 98862 45522