ನಗೋಯಾ: ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ (Asian Para Games) ಭಾರತದ ಸಂದೀಪ್ ಸಿಂಗ್ ಮನ್ ಮತ್ತು ಹ್ಯಾನಿ ಅವರು ಕ್ರಮವಾಗಿ ಪುರುಷರ 400 ಮೀಟರ್ಸ್ ಮತ್ತು ಜಾವೆಲಿನ್ ಸ್ಪರ್ಧೆಗಳಲ್ಲಿ ದೇಶಕ್ಕೆ ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ.
ಐಚಿ ನಗೋಯಾದಲ್ಲಿ (Aichi Nagoya) ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಪುರುಷರ 400 ಮೀಟರ್ಸ್ನಲ್ಲಿ ಸಂದೀಪ್ ಸಿಂಗ್ (Sandeep Singh) ಹಾಗೂ ಜಾವೆಲಿನ್ನಲ್ಲಿ ಹ್ಯಾನಿ (Haney) ವಿಶ್ವ ದಾಖಲೆಯನ್ನು ನಿರ್ಮಿಸುವ ಮೂಲಕ ಭಾರತಕ್ಕೆ ಮತ್ತೆರೆಡು ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ.
ಭಾರತೀಯ ಕ್ರೀಡಾಪಟುಗಳ ತಂಡವು 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಪುರುಷರ 400 ಮೀ ಓಟದಲ್ಲಿ ಚಿನ್ನದ ಪದಕವನ್ನು ಗೆಲ್ಲಲು 52.28 ಸೆಕೆಂಡುಗಳ ದಾಖಲೆ ನಿರ್ಮಿಸಿದರು. ಆರಂಭದಿಂದಲೂ ಓಟದಲ್ಲಿ ಮುನ್ನಡೆ ಸಾಧಿಸಿ, ಇಡೀ ರೇಸ್ನಲ್ಲಿ ಆ ಮುನ್ನಡೆಯನ್ನು ಕಾಯ್ದುಕೊಂಡರು. ರೇಸ್ನಲ್ಲಿ ಸೌದಿ ಅರೇಬಿಯಾದ ಅಲ್ಸಾನಾ ನೂರ್ ಅವರು ಕೊನೆಯಲ್ಲಿ ತೀವ್ರ ಪೈಪೋಟಿ ನೀಡಿದರು. ಆದರೆ ಸಂದೀಪ್ ಸಿಂಗ್ ಗಟ್ಟಿಯಾಗಿ ನಿಂತು ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟರು.
ಇನ್ನೂ ಇದೇ ಸ್ಪರ್ಧೆಯಲ್ಲಿ ಭಾರತದ ಅಜಯ್ ಕುಮಾರ್ 53.61 ಸೆಕೆಂಡುಗಳ ಪ್ರಯತ್ನವನ್ನು ದಾಖಲಿಸಿ, ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ವಿಶ್ವ ದಾಖಲೆ ಮುರಿದು ಹ್ಯಾನಿ ಅವರಿಗೆ ಚಿನ್ನ:
ಭಾರತದ ಹ್ಯಾನಿ ಅವರು ಪುರುಷರ ಜಾವೆಲಿನ್ ಎಫ್37/38 ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹ್ಯಾನಿ ಅವರು ಐದನೇ ಪ್ರಯತ್ನದಲ್ಲಿ ಹ್ಯಾನಿ 59.72 ಮೀಟರ್ಸ್ ದೂರ ಎಸೆಯುವ ಮೂಲಕ ಮೊದಲ ವಿಶ್ವ ದಾಖಲೆಯನ್ನು ಮುರಿದರು. ನಂತರ ತಮ್ಮ ಆರನೇ ಪ್ರಯತ್ನದಲ್ಲಿ 60.49 ಮೀಟರ್ಸ್ ದೂರ ಎಗೆಯುವ ಮೂಲಕ ತಮ್ಮದೇ ದಾಖಲೆಯನ್ನು ಮತ್ತೊಮ್ಮೆ ಮುರಿದರು.
ಈ ಮೂಲಕ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ















