ಪಯ್ಯಾರು ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಪಯ್ಯಾರು ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಕ್ಷೇತ್ರದ ತಂತ್ರಿಗಳಾದ ಉದಯ ತಂತ್ರಿಯವರ ಪೌರೋಹಿತ್ಯದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನೆರವೇರಿದವು.
ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳಾದ ದಿವಾಕರ ಬಿ. ಶೆಟ್ಟಿ ಹಾಗೂ ರಾಜೇಶ್ ಮೂಲ್ಯ ಕುತ್ಯಾರು, ಕ್ಷೇತ್ರದ ಅಧ್ಯಕ್ಷರಾದ ಜಗದೀಶ್ ನಾಯ್ಕ್, ಕಾರ್ಯದರ್ಶಿ ರವಿರಾಜ್ ನಾಯ್ಕ್, ಅರ್ಚಕರಾದ ಮಾಧವ ನಾಯ್ಕ್ ಪಯ್ಯಾರು, ಕೋಶಾಧಿಕಾರಿ ಗಿರೀಶ್ ನಾಯ್ಕ್ ಸೂರ್ಯನಗರ, ಸಹ ಕೋಶಾಧಿಕಾರಿ ಸಚಿನ್ ಶಿವ ನಾಯ್ಕ್, ಅಣ್ಣಿ ನಾಯ್ಕ್, ನಿತ್ಯಾನಂದ ನಾಯ್ಕ್ ಪಯ್ಯಾರು, ಪ್ರೇಮ ನಾಯ್ಕ್, ವಸಂತ ನಾಯ್ಕ್ ಪಯ್ಯಾರು, ಬೇಬಿ ನಾಯ್ಕ್ ಸೂರ್ಯನಗರ ಸೇರಿದಂತೆ ನಾಯ್ಕ್ ಸಮಾಜದ ಮಹಿಳಾ ಹಾಗೂ ಪುರುಷ ಸದಸ್ಯರುಗಳು ಉಪಸ್ಥಿತರಿದ್ದರು.
ನವರಾತ್ರಿ ಉತ್ಸವದ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆಯೂ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.