ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಮಂಗಳಾದೇವಿ, ಕಟೀಲು, ಕೊಲ್ಲೂರು ಸೇರಿದಂತೆ ಪ್ರಮುಖ ದೇವಿ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಹಾಗೂ ಚಂಡಿಕಾಯಾಗ ನಡೆಯುತ್ತಿವೆ.
ದಕ್ಷಿಣ ಕನ್ನಡ: ನಾಡಿನೆಲ್ಲೆಡೆ ನವರಾತ್ರಿ (Navaratri) ಹಬ್ಬದ ಭಕ್ತಿ ಹಾಗೂ ಸಂಭ್ರಮದ ವಾತಾವರಣ ಮನೆಮಾಡಿದೆ. ಈ ಒಂಬತ್ತು ಪವಿತ್ರ ದಿನಗಳಲ್ಲಿ ಭಕ್ತಾದಿಗಳು (Devotees) ರಾಜ್ಯದ ನಾನಾ ಭಾಗಗಳಿಂದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಕೃಪೆಗೆ ಪಾತ್ರರಾಗುತ್ತಿದ್ದಾರೆ. ವಿಶೇಷವಾಗಿ ಕರಾವಳಿ ಕರ್ನಾಟಕ (Karnataka) ಎಂದರೆ ಅದೊಂದು ದೈವಿಕ ಹಾಗೂ ಆಧ್ಯಾತ್ಮಿಕ ಶಕ್ತಿಯ ನೆಲೆವೀಡು. ದೈವಾರಾಧನೆಗೆ ಜಗತ್ಪ್ರಸಿದ್ಧವಾಗಿರುವ ಉಡುಪಿ (Udupi) ಮತ್ತು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗಳಲ್ಲಿ ಶ್ರೀ ದೇವಿಯ ಆರಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಪ್ರಮುಖ ಸ್ಥಾನವಿದೆ.
ಪ್ರಭಾವಿ ದೇವಿ ಕ್ಷೇತ್ರಗಳು
ಕರಾವಳಿಗೆ ಆಗಮಿಸುವ ದೇಶ-ವಿದೇಶಗಳ ಲಕ್ಷಾಂತರ ಭಕ್ತರು ಇಲ್ಲಿನ ಪುರಾತನ ದೇವಿ ದೇವಾಲಯಗಳಿಗೆ ಭೇಟಿ ನೀಡದೆ ವಾಪಸ್ ತೆರಳುವುದೇ ಇಲ್ಲ. ಅಂತಹ ಪ್ರಸಿದ್ಧ ಹಾಗೂ ಭಕ್ತರ ಇಷ್ಟಾರ್ಥ ಈಡೇರಿಸುವ ಪ್ರಭಾವಿ ದೇವಿ ಕ್ಷೇತ್ರಗಳ ಸಂಪೂರ್ಣ ವಿವರ ಇಲ್ಲಿದೆ.















