ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ಹಾಗೂ Orane International ವತಿಯಿಂದ ದಸರಾ ಮತ್ತು ದೀಪಾವಳಿ ಹಬ್ಬಗಳ ಪ್ರಯುಕ್ತ ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿಪರ ತರಬೇತಿ ಪಡೆಯಲು ಆಸಕ್ತರಿಗಾಗಿ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ.
ಈ ಕೊಡುಗೆಯು 2026ರ ಅಕ್ಟೋಬರ್ 12ರಿಂದ ನವೆಂಬರ್ 30ರವರೆಗೆ ಲಭ್ಯವಿರಲಿದೆ.
ವೃತ್ತಿಪರ ಮೇಕಪ್ ಡಿಪ್ಲೊಮಾ ಕೋರ್ಸ್ಗೆ ವಿಶೇಷ ಸೌಲಭ್ಯ
ವೃತ್ತಿಪರ ಮೇಕಪ್ ಡಿಪ್ಲೊಮಾ ಕೋರ್ಸ್ಗೆ ಸೇರ್ಪಡೆಗೊಳ್ಳುವವರಿಗೆ ಕೋರ್ಸ್ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತದೆ. ಜೊತೆಗೆ ಐಶ್ಯಾಡೋ ಪ್ಯಾಲೆಟ್ ಉಡುಗೊರೆ ರೂಪದಲ್ಲಿ ಲಭ್ಯವಿದ್ದು, ಬಾಕ್ಸ್ ಪ್ಲೀಟಿಂಗ್ ಕಾರ್ಯಾಗಾರದಲ್ಲಿ ಉಚಿತವಾಗಿ ಭಾಗವಹಿಸುವ ಅವಕಾಶವಿದೆ.
ನೇಲ್ ಟೆಕ್ನಿಷಿಯನ್ ಡಿಪ್ಲೊಮಾ ಕೋರ್ಸ್ಗೂ ರಿಯಾಯಿತಿ
ನೇಲ್ ಟೆಕ್ನಿಷಿಯನ್ ಡಿಪ್ಲೊಮಾ ಕೋರ್ಸ್ಗೆ ಸೇರ್ಪಡೆಗೊಳ್ಳುವವರಿಗೂ ಶೇ. 25ರಷ್ಟು ಶುಲ್ಕ ರಿಯಾಯಿತಿ ಘೋಷಿಸಲಾಗಿದೆ.
ಈ ಕೋರ್ಸ್ನ ವಿದ್ಯಾರ್ಥಿಗಳಿಗೆ ಜೆಲ್ ಪಾಲಿಶ್ ಹಾಗೂ ಮ್ಯಾಗ್ನೆಟಿಕ್ ಯುವಿ ಉತ್ಪನ್ನಗಳ ಉಡುಗೊರೆ ನೀಡಲಾಗುತ್ತದೆ. ಅಲ್ಲದೆ, ಪೌಷ್ಟಿಕಾಂಶ ಕಾರ್ಯಾಗಾರ ಮತ್ತು ಬಾಕ್ಸ್ ಪ್ಲೀಟಿಂಗ್ ಕಾರ್ಯಾಗಾರಗಳಲ್ಲಿ ಉಚಿತವಾಗಿ ಭಾಗವಹಿಸಬಹುದು.
ಸೌಂದರ್ಯ, ತ್ವಚೆ ಆರೈಕೆ, ಮೇಕಪ್, ನೇಲ್ ಆರ್ಟ್ ಮತ್ತು ಹೇರ್ ಕ್ಷೇತ್ರಗಳಲ್ಲಿ ಕೌಶಲ್ಯ ಬೆಳೆಸಿಕೊಂಡು ವೃತ್ತಿಪರ ಅವಕಾಶಗಳನ್ನು ಪಡೆಯಲು ಬಯಸುವವರಿಗೆ ಈ ಕೊಡುಗೆ ಅನುಕೂಲಕರವಾಗಿದೆ.
ಹೆಚ್ಚಿನ ಮಾಹಿತಿಗೆ 8123165068 ಸಂಖ್ಯೆಯನ್ನು ಸಂಪರ್ಕಿಸಬಹುದು















