ಸಿಜೆಪಿ ಅನ್ನುವುದು ಯಾವುದೇ ಒಂದು ರಾಜಕೀಯ ಪಕ್ಷವು ಅಲ್ಲ ಮಾತ್ರವಲ್ಲ ಮುಂದೆ ಯಾವುದೆ ಸಂದರ್ಭದಲ್ಲಿ ಅದೊಂದು ರಾಜಕೀಯ ಪಕ್ಷವಾಗಲು ಸಾಧ್ಯವು ಇಲ್ಲ.ಅದೊಂದು ರಾಷ್ಟ್ರ ವಿರೇೂಧಿ ಜನ ವಿರೇೂಧಿ ಮಾತ್ರವಲ್ಲ ದೇಶದಲ್ಲಿ ಅರಾಜಕತಾವಾದ ಸೃಷ್ಟಿಸುವ ಚುನಾವಣೆಗಳಲ್ಲಿ ಸೇೂಲುಕಂಡು ನೆಲಕಚ್ಚಿದ ರಾಜಕೀಯ ಪಕ್ಷಗಳ ಕೃಪಾಪೇೂಷಿತ ಅಲೆಮಾರಿ ಜಿರಳೆಗಳ ಪೇೂಷಿತ ಸಂಘ.ಇವುಗಳಿಗೆ ಯಾವುದೇ ದಿಕ್ಕು ಇಲ್ಲ ಗುರಿಯೂ ಇಲ್ಲ.ಕೆಲವೊಂದು ರಾಜಕೀಯ ಪಕ್ಷಗಳ ದಾಸರಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿ ಚುನಾಯಿತ ಕೇಂದ್ರ ಬಿಜೆಪಿ ಸರ್ಕಾರದಹೆಸರನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಡಿಸುವುದೆ ಇವರ ಪರಮ ಉದ್ದೇಶ ಅನ್ನುವುದು ಅಷ್ಟೇ ಸ್ವಷ್ಟ.
ಕಳೆದ ಬಾರಿ ನೀಟ್ ನ್ನೆ ವಿಷಯವಾಗಿಟ್ಟು ಕೊಂಡು ಬೀದಿ ರಂಪಾಟ ಮಾಡಿ ಅಂತೂ ಕೊನೆಗೂ ಶಿಕ್ಷಣ ಸಚಿವರು ರಾಜೀನಾಮೆ ಕೊಡುವ ಪರಿಸ್ಥಿತಿ ತಂದರು.ಇದು ತಮ್ಮ ದೊಡ್ಡದೊಂದು ಸಾಧನೆ ಅನ್ನುವ ರೀತಿಯಲ್ಲಿ ಈಗ ಮತ್ತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ರನ್ನು ಇಳಿಸಿ ಬಿಟ್ಟರೆ ರಾಷ್ಟ್ರ ವ್ಯಾಪಿಯಾಗಿ ತಮ್ಮ ಪ್ರಭುತ್ವ ಮೆರೆಯ ಬಹುದೆಂಬ ಗುಂಗಿನಲ್ಲಿ ಸೇೂಲುಂಡ ರಾಜಕೀಯ ಪಕ್ಷಗಳ ಜೊತೆ ಜಿರಳೆಗಳು ಹಗಲು ಕನಸು ಕಾಣುತ್ತಿದ್ದಾವೆ.
ಇಲ್ಲಿ ಬಹು ಮುಖ್ಯವಾಗಿ ನಮ್ಮನ್ನು ಕಾಡುವ ಪ್ರಶ್ನೆ ಈ ಎಲ್ಲಾ ಜಿರಳೆಗಳ ಹಿನ್ನೆಲೆ ಏನು?ಯಾವ ದೇಶದಿಂದ ವಲಸೆ ಬಂದಿದ್ದಾವೆ..ಇವುಗಳಿಗೆ ಹಣದ ವ್ಯವಸ್ಥೆ ಎಲ್ಲಿಂದ ಹರಿದು ಬರುತ್ತಿದೆ..ಇಂತಹ ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಇವರಿಗೆ ಬುದ್ಧಿ ಭ್ರಮಣೆ ಮಾಡಿದ ಬೇೂಧಕರು ಯಾರು ಶಿಕ್ಷಣ ಸಂಸ್ಥೆಗಳು ಯಾವುವು ಅನ್ನುವುದನ್ನು ದೇಶದ ಭದ್ರತೆಯ ದೃಷ್ಟಿಯಿಂದ ಅತೀ ಶೀಘ್ರವಾಗಿ ಕಂಡು ಹುಡುಕ ಬೇಕಾಗಿದೆ..
ಎಸ್.ಐ.ಆರ್…ಇರ ಬಹುದು ಇವಿಎಂ.ಇರ ಬಹುದು ಇದರ ಬಗ್ಗೆ ಪ್ರಶ್ನೆ ಮಾಡುವರು ಅವುಗಳ ಲೇೂಪದೇೂಷದ ಬಗ್ಗೆ ಸ್ವಷ್ಟವಾದ ಮಾಹಿತಿ ಮತ್ತು ಸಾಕ್ಷಿ ಬೇಕು.ಅದು ಯಾವುದು ಇಲ್ಲದೆ ಬರೇ ತಾವು ಎಲ್ಲಿ ಸೇೂತಿದ್ದೇವೆ ಅಲ್ಲಿ ಮಾತ್ರ ಮತದಾರರ ಪಟ್ಟಿ ಸರಿ ಇಲ್ಲಿ ಇವಿಎಂ ಸರಿ ಇಲ್ಲ ಅನ್ನುವುದರಲ್ಲಿ ಯಾವುದೇ ಅಥ೯ವಿಲ್ಲ..ತ್ರಿಪುರದಲ್ಲಿ ಬ್ಯಾಲೆಟ್ ಪೆಪ್ಪರ್ ಬಳಸಿ ಚುನಾವಣೆ ನಡೆಸಿದಾಗ ಅಲ್ಲಿ ಕೂಡಾ ಇವಿಎಂ..ಪ್ರಶ್ನೆ ಮಾಡಿದವರೇ ನೆಲ ಕಚ್ಚಿದ್ದಾರೆ ಅನ್ನುವಾಗ ಹಾಗಾದರೆ ಇವರಿಗೆ ಇನ್ನೆಂತಹ ಚುನಾವಣೆ ಬೇಕುನೀವೇ ಹೇಳಿ.? ಚುನಾವಣೆಯಲ್ಲಿ ಸೇೂತು ಸುಣ್ಣಗಾದ ಕಾರಣ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನು ದೂಷಿಸುವುದು ಎಷ್ಟು ಸರಿ?
ಈ ಜಿರಳೆ ಮತ್ತು ಸೇೂಲುಂಡರಾಜಕೀಯ ಪಕ್ಷಗಳ ದಿನ ನಿತ್ಯದ ಬೀದಿ ರಂಪಾಟದಲ್ಲಿ ದಿನ ನಿತ್ಯವೂ ನೇೂವು ಅನುಭವಿಸುವವರು ನಮ್ಮ ಪೊಲೀಸ್ ಇಲಾಖೆಯವರು. ಅವರುಅತ್ಯಂತ ಸಹನೆಯಿಂದ ಎಲ್ಲಿಯೂ ಒಂದಿಂಚ್ಚು ಕಾನೂನು ಭಂಗವಾಗದ ತರದಲ್ಲಿ ಪುಂಡ ಪೇೂಕರಿಗಳನ್ನು ಸಮಜಾಯಿಸಿ ಕೊಂಡು ಕಾನೂನು ಸುವ್ಯವಸ್ಥೆ ಕಾಪಾಡವಲ್ಲಿ ತಮ್ಮ ಪ್ರಾಣವನ್ನೆ ಮೂಡಿಪಾಗಿಟ್ಟು ಕಾರ್ಯ ನಿವ೯ಹಿಸುತ್ತಾ ಬಂದಿದ್ದಾರೆ. ನಿಜವಾದ ಅಥ೯ದಲ್ಲಿನಮ್ಮ ಪ್ರಜಾಪ್ರಭುತ್ವ ಸಂರಕ್ಷರೆಂದರೆ ನಮ್ಮ ಪೇೂಲಿಸ್ ರಕ್ಷಣಾ ಇಲಾಖೆ.ಈ ಜಿರಳೆಗಳ ಪ್ರತಿನಿತ್ಯದ ಕಾಟದಿಂದ ಜನಸಾಮಾನ್ಯರಂತು ರೇೂಸಿ ಹೇೂಗಿದ್ದಾರೆ.ಈ ಕೇಂದ್ರ ಸರ್ಕಾರ ಯಾಕೆ ಇವರ ಬಗ್ಗೆ ಇಷ್ಟೊಂದು ಮೃದುವಾಗಿ ವತಿ೯ಸ ಬೇಕಿತ್ತು ಅನ್ನುವ ಪ್ರಶ್ನೆಯನ್ನು ಪ್ರಧಾನಿ ಮತ್ತು ಗೃಹ ಸಚಿವರಿಗೆ ನೇರವಾಗಿ ಕೇಳುತ್ತಿದ್ದಾರೆ.:>ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ















