ರಚನಾಗೆ ಪಿ.ಎಚ್.ಡಿ. ಪದವಿ

ಕಾರ್ಕಳ: ನಿಟ್ಟೆಯ ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ರಚನಾ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿ ನೀಡಿದೆ.

ರಚನಾ ಅವರು ಆನ್‌ಲೈನ್‌ನಲ್ಲಿ ತಕ್ಷಣದ ಪ್ರೇರಣೆಯಿಂದ ಖರೀದಿಸುವ ಗ್ರಾಹಕರ ಪ್ರವೃತ್ತಿಗಳ ಅನಾವರಣ (Unveiling the Shopping Tendencies of Customers Towards Online Impulsive Buying Intentions) ವಿಷಯದಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕಿ ಡಾ. ಸುಜಯಾ ಎಚ್.ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

ಅವರ ಸಂಶೋಧನಾ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಅಂಗೀಕರಿಸಿದ್ದು, ರಚನಾ ಅವರು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜೀವ್ ಕಾಂಚನ್ ಮತ್ತು ಮೀನಾಕ್ಷಿ ಸುವರ್ಣ ಅವರ ಪುತ್ರಿ, ಮನೀಶ್ ಕೆ. ಸಾಲಿಯಾನ್ ಅವರ ಪತ್ನಿ.