ಮಣಿಪಾಲ: ಆರೋಗ್ಯಕರ ಜೀವನಕ್ಕಾಗಿ ಸಮಗ್ರ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಮಣಿಪಾಲದ ವೇಣುಗೋಪಾಲ್ ಟೆಂಪಲ್ ರಸ್ತೆಯಲ್ಲಿ ‘ರಿಹ್ಯಾಬ್ ಥೆರಪೀಸ್ ಹಬ್’ಕಾರ್ಯನಿರ್ವಹಿಸುತ್ತಿದೆ.
ಬೆನ್ನು ನೋವು, ಕತ್ತಿನ ನೋವು, ಮೊಣಕಾಲು ಮತ್ತು ಪಾದದ ನೋವು, ಭುಜದ ನೋವು ಸೇರಿದಂತೆ ವಿವಿಧ ರೀತಿಯ ನೋವುಗಳಿಗೆ ಇಲ್ಲಿ ಫಿಜಿಯೋಥೆರಪಿ ಮೌಲ್ಯಮಾಪನ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಕ್ರೀಡೆ ಸಂಬಂಧಿತ ಗಾಯಗಳು, ಪಾರ್ಶ್ವವಾಯು ನಂತರದ ಪುನರ್ವಸತಿ, ಫೇಷಿಯಲ್ ಪಾಲ್ಸಿ, ಪಾರ್ಶ್ವವಾಯು, ನಡೆಯುವ ತರಬೇತಿ ಹಾಗೂ ನೋವು ನಿಯಂತ್ರಣಕ್ಕೂ ಚಿಕಿತ್ಸಾ ಸೇವೆಗಳು ಲಭ್ಯವಿವೆ.
ವ್ಯಾಯಾಮ ಚಿಕಿತ್ಸೆ, ಎಲೆಕ್ಟ್ರೋಥೆರಪಿ (IFT, TENS), ಅಲ್ಟ್ರಾಸೌಂಡ್ ಥೆರಪಿ, ಮ್ಯಾನುಯಲ್ ಥೆರಪಿ, ಕಪ್ಪಿಂಗ್ ಥೆರಪಿ, ಡ್ರೈ ನೀಡ್ಲಿಂಗ್, ಸ್ಪೋರ್ಟ್ಸ್ ಮಸಾಜ್ ಹಾಗೂ ಟ್ರಿಗರ್ ಪಾಯಿಂಟ್ ರಿಲೀಸ್ ಸೇರಿದಂತೆ ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಕೇಂದ್ರದಲ್ಲಿ ಒದಗಿಸಲಾಗುತ್ತಿದೆ. ಕಾರ್ಯಸ್ಥಳದಲ್ಲಿ ಸರಿಯಾದ ದೇಹದ ಭಂಗಿ ಮತ್ತು ಚಲನವಲನಕ್ಕೆ ಸಂಬಂಧಿಸಿದ ಎರ್ಗೋನಾಮಿಕ್ ಸಲಹೆಯನ್ನೂ ನೀಡಲಾಗುತ್ತದೆ. ಎಲ್ಲ ವಯೋಮಾನದವರಿಗೂ ಸೇವೆಗಳು ಲಭ್ಯವಿದ್ದು, ಆರೋಗ್ಯಕರ ತೂಕ ಇಳಿಕೆಗೂ ಮಾರ್ಗದರ್ಶನ ನೀಡಲಾಗುತ್ತದೆ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9ರಿಂದ ಸಂಜೆ 8ರವರೆಗೆ ಸೇವೆ ಲಭ್ಯವಿರುತ್ತದೆ. ಮುಂಚಿತವಾಗಿ ಸಮಯ ನಿಗದಿಪಡಿಸಿಕೊಂಡು ಭೇಟಿ ನೀಡಬಹುದು ಹೆಚ್ಚಿನ ಮಾಹಿತಿಗಾಗಿ 81050 99264 ಸಂಪರ್ಕಿಸಬಹುದು















