ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಪಾಂಗಾಳ ಮಂಡೇಡಿ ಇನ್ನಂಜೆ ಇದರ ಬ್ರಹ್ಮ ಕಲಶೋತ್ಸವ

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ರತ್ನಾಕರ್ ಶೆಟ್ಟಿ ವಸಾಯಿ, ಗೌರವದ್ಯಕ್ಸರಾಗಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಆಯ್ಕೆ

ಕಾಪು, ಸೆ.22- ಕಾಪು ಇನ್ನಂಜೆ ಗ್ರಾಮದ ಪಾಂಗಾಳ ಮಂಡೇಡಿ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಬ್ರಹ್ಮಕಲಶೋತ್ಸವ ಹಾಗೂ ಸಾನಿಧ್ಯ ಜೀರ್ಣೋದ್ಧಾರ ನಿಮಿತ್ತ ಪಾಂಗಲಣ್ಣ ಬಂಟ ಕುಟುಂಬದವರೆಲ್ಲರೂ ಸೇರಿ ಸಂಕಲ್ಪಿಸಿರುವುದು, ಬ್ರಹ್ಮ ಕಲಶ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷರಾಗಿ ವಸಾಯಿ ಡ್ರೀಮ್ಸ್ ಲ್ಯಾಂಡ್ ಹೋಟೆಲಿನ ಮಾಲಕರಾದ ರತ್ನಾಕರ್ ಶೆಟ್ಟಿ ವಸಾಯಿ, ಸಾಧು ಮನೆ ಮoಡೇಡಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮದ್ಯ ಗುತ್ತು ಕೆ.ಎಂ ಶೆಟ್ಟಿ, ಡಾ.ಎಚ್ ನವೀನ್ ಶೆಟ್ಟಿ ಬೆಂಗಳೂರು, ನಕ್ಷತ್ರ ಎಚ್ ಶೆಟ್ಟಿ ಬೆಂಗಳೂರು, ಗೋಪಾಲ್ ಶೆಟ್ಟಿ ಮೂಡುಮನೆ, ಮoಡೇಡಿ, ಉಪಾಧ್ಯಕ್ಷರುಗಳಾಗಿ ಹರೀಶ್ ಶೆಟ್ಟಿ ಗುರ್ಮೆ, ಭಾಸ್ಕರ ಶೆಟ್ಟಿ ಮೂಡನಿಡಂಬೂರು, ಗುರ್ಮೆ ಸತೀಶ್ ಶೆಟ್ಟಿ, ಸಿಎ ಸದಾಶಿವ ಶೆಟ್ಟಿ ಬಾಂದ್ರಾ ಮುಂಬೈ, ಸಿಎ ಕರುಣಾಕರ ಶೆಟ್ಟಿ ಥಾಣೆ,ನಯೇಶ್ ಶೆಟ್ಟಿ ಎಲ್ಲೂರು, ರವೀಂದ್ರ ಶೆಟ್ಟಿ ಮೂಡುಮನೆ ಮಂಡೇಡಿ, ವಿಶ್ವನಾಥ್ ಆರ್ ಶೆಟ್ಟಿ ಕಾಪು, ವಿನಯ್ ಶೆಟ್ಟಿ ಮೂಡುಬೆಳ್ಳೆ, ಸುನಂದ ಭೋಜ ಶೆಟ್ಟಿ ಸಿಂಧೂ ನಿಲಯ ಮಂಡೇಡಿ ಮತ್ತು ಸುರೇಖಾ ಧನಂಜಯ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಹಾಗೂ ಕಾರ್ಯದರ್ಶಿಯಾಗಿ ಶಿಲ್ಪಾ ನವೀನ್ ಶೆಟ್ಟಿ, ಕೋಶಾಧಿಕಾರಿಯಾಗಿ ಆಗಿ ಚಂದ್ರಹಾಸ ಶೆಟ್ಟಿ ಪಡು ಮೇಲ್ಮನೆ ಮಂಡೇಡಿ ಮತ್ತು ಲೆಕ್ಕ ಪರಿಶೋಧಕರಾಗಿ ಸಂತೋಷ್ ಶೆಟ್ಟಿ ಮಂಡೇಡಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.