ಉಡುಪಿ: ಚರ್ಮದ ಆರೋಗ್ಯ ಕೇವಲ ಸೌಂದರ್ಯದ ವಿಚಾರವಲ್ಲ; ಅದು ವ್ಯಕ್ತಿಯ ಆತ್ಮವಿಶ್ವಾಸಕ್ಕೂ ಸಂಬಂಧಿಸಿದೆ. ಇಂತಹ ಚರ್ಮಕ್ಕೆ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಮಸ್ಯೆ ಬಂದಾಗ ಸೂಕ್ತ ವೈದ್ಯರು ಸಿಕ್ಕಿದರೆ ಭಯ ಪಡಬೇಕಿಲ್ಲ. ಮೊಡವೆ, ಕಲೆ, ಪಿಗ್ಮೆಂಟೇಶನ್, ಕೂದಲು ಉದುರುವಿಕೆ ಸೇರಿದಂತೆ ವಿವಿಧ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ತಜ್ಞರ ಸಲಹೆ ಹಾಗೂ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಉಡುಪಿಯ ಕೊಳದಪೇಟೆಯಲ್ಲಿ ‘ಜಲಜ ಸ್ಕಿನ್ ಕ್ಲಿನಿಕ್’ ಕಾರ್ಯನಿರ್ವಹಿಸುತ್ತಿದೆ.
ಸಾಯಿ ಹರ್ಷ ಸ್ಕ್ವೇರ್ನ ಮೊದಲ ಮಹಡಿಯಲ್ಲಿ ಇರುವ ಕ್ಲಿನಿಕ್ನಲ್ಲಿ ಚರ್ಮರೋಗ ತಜ್ಞ ಡಾ. ಸನತ್ ಎಸ್. ರಾವ್, ಎಂ.ಡಿ. ಅವರು ತಜ್ಞರ ಸಲಹೆ ಮತ್ತು ಚಿಕಿತ್ಸಾ ಸೇವೆ ನೀಡುತ್ತಿದ್ದಾರೆ. ಚರ್ಮ, ಕೂದಲು, ಉಗುರು ಹಾಗೂ ಕಾಸ್ಮೆಟಾಲಜಿ ಸಂಬಂಧಿತ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ.
ಮೊಡವೆಯಿಂದ ಪಿಗ್ಮೆಂಟೇಶನ್ವರೆಗೆ:
ಮೊಡವೆ, ಪಿಗ್ಮೆಂಟೇಶನ್, ಸೂರ್ಯನ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿ, ಕಲೆಗಳು ಹಾಗೂ ಚರ್ಮದ ಕಾಂತಿ ಹೆಚ್ಚಿಸುವಂತಹ ಅಗತ್ಯಗಳಿಗೆ ಸ್ಕಿನ್ ಪೀಲ್ಸ್ ಮತ್ತು ಮೈಕ್ರೋಡರ್ಮಾಬ್ರೇಶನ್ ಸೇರಿದಂತೆ ವಿವಿಧ ಚಿಕಿತ್ಸಾ ಸೌಲಭ್ಯಗಳು ಇಲ್ಲಿ ಲಭ್ಯವಿವೆ.
ಮೊಡವೆಗಳಿಂದ ಉಂಟಾದ ಕಲೆಗಳು ಹಾಗೂ ಚರ್ಮದ ಪುನರುಜ್ಜೀವನಕ್ಕೆ ಡರ್ಮರೋಲರ್, ಸುಕ್ಕುಗಳು ಮತ್ತು ಚರ್ಮದ ಪುನರುಜ್ಜೀವನಕ್ಕೆ ಬೊಟಾಕ್ಸ್ ಇಂಜೆಕ್ಷನ್ ಸೇರಿದಂತೆ ಕಾಸ್ಮೆಟಾಲಜಿ ಚಿಕಿತ್ಸೆಗಳೂ ಲಭ್ಯವಿವೆ.
ಕೂದಲು, ಉಗುರು ಸಮಸ್ಯೆಗಳಿಗೂ ಪರಿಹಾರ:
ಚರ್ಮದ ಜೊತೆಗೆ ಕೂದಲು ಹಾಗೂ ಉಗುರುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಕ್ಲಿನಿಕ್ನಲ್ಲಿ ತಜ್ಞರ ಸಲಹೆ ಪಡೆಯಬಹುದಾಗಿದೆ. ವಿಟಿಲಿಗೋ, ಮೊಡವೆ, ಸಿಸ್ಟ್ ಸೇರಿದಂತೆ ಕೆಲವು ಚರ್ಮ ಸಮಸ್ಯೆಗಳಿಗೆ ಡರ್ಮಟೋ ಸರ್ಜರಿ, ಅಲರ್ಜಿ ಪತ್ತೆಗಾಗಿ ಪ್ಯಾಚ್ ಟೆಸ್ಟಿಂಗ್ ಸೌಲಭ್ಯವೂ ಇದೆ.
ಅನಗತ್ಯ ಕೂದಲು ತೆಗೆಯುವುದು ಹಾಗೂ ಮೊಡವೆ ಕಲೆಗಳಿಗಾಗಿ ಲೇಸರ್ ಚಿಕಿತ್ಸೆ, ನರಹುಲಿ ಹಾಗೂ ಅನಗತ್ಯ ಚರ್ಮದ ಬೆಳವಣಿಗೆಗಳಿಗೆ RF ಕಾಟರಿ ಮತ್ತು ಎಲೆಕ್ಟ್ರೋ ಕಾಟರಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ತಜ್ಞರ ಸಲಹೆಯೊಂದಿಗೆ ಆರೈಕೆ
ಚರ್ಮದ ಸಮಸ್ಯೆಗಳಿಗೆ ಸ್ವಯಂ ಚಿಕಿತ್ಸೆ ಅಥವಾ ಅಸಮರ್ಪಕ ಸೌಂದರ್ಯ ಉತ್ಪನ್ನಗಳ ಬಳಕೆಯ ಬದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಈ ನಿಟ್ಟಿನಲ್ಲಿ ವಿವಿಧ ಚರ್ಮ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸಾ ಮಾರ್ಗದರ್ಶನ ನೀಡುವ ಕೇಂದ್ರವಾಗಿ ಜಲಜ ಸ್ಕಿನ್ ಕ್ಲಿನಿಕ್ ಸೇವೆ ಸಲ್ಲಿಸುತ್ತಿದೆ.
ಕ್ಲಿನಿಕ್ ಸಾಯಿ ಹರ್ಷ ಸ್ಕ್ವೇರ್, 1ನೇ ಮಹಡಿ, ಓಲ್ಡ್ ಪೋಸ್ಟ್ ಆಫೀಸ್ ರಸ್ತೆ, ಕೊಳದಪೇಟೆ, ಉಡುಪಿ ಇಲ್ಲಿ ಇದೆ. ಸೇವೆಯ ಸಮಯ ಬೆಳಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 7.30ರವರೆಗೆ. ಭಾನುವಾರ ರಜೆ.
ಅಪಾಯಿಂಟ್ಮೆಂಟ್ಗಾಗಿ 0820-2525199 / 7349093199 ಸಂಖ್ಯೆಗೆ ಸಂಪರ್ಕಿಸಬಹುದು.















