ಮಣಿಪಾಲ: ಪ್ರೊಸ್ಟೇಟ್ ಜಾಗೃತಿ ಮಾಸಾಚರಣೆ ಅಂಗವಾಗಿ ಮಣಿಪಾಲದ ಮುನಿಯಾಲ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಶಲ್ಯತಂತ್ರ ವಿಭಾಗದ ವತಿಯಿಂದ ಸೆ. 21ರಿಂದ 26ರವರೆಗೆ ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಉಚಿತ ಪ್ರೊಸ್ಟೇಟ್ ಆರೋಗ್ಯ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ಆಯೋಜಿಸಲಾಗಿದೆ.
ಪುರುಷರಲ್ಲಿ ಕಂಡುಬರುವ ಪದೇಪದೇ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆಗೆ ತುರ್ತು ಭಾವನೆ, ಮೂತ್ರ ತೊಟ್ಟಿಕ್ಕುವುದು, ಮೂತ್ರದ ಹರಿವು ಕಡಿಮೆಯಾಗುವುದು, ಮೂತ್ರ ವಿಸರ್ಜನೆ ಆರಂಭಿಸಲು ತೊಂದರೆ, ಮೂತ್ರಕೋಶ ಸಂಪೂರ್ಣ ಖಾಲಿಯಾಗದಿರುವ ಭಾವನೆ ಹಾಗೂ ಸೊಂಟ ಮತ್ತು ಶಿಶ್ನ ಭಾಗದಲ್ಲಿ ನೋವು ಮುಂತಾದ ಸಮಸ್ಯೆಗಳ ಕುರಿತು ಶಿಬಿರದಲ್ಲಿ ತಪಾಸಣೆ ಹಾಗೂ ತಜ್ಞರ ಸಲಹೆ ನೀಡಲಾಗುವುದು.
ಶಿಬಿರದಲ್ಲಿ ಉಚಿತ ವೈದ್ಯಕೀಯ ಸಮಾಲೋಚನೆ ಲಭ್ಯವಿದ್ದು, ಪಿ ಯೆಸ್ ಎ ಪರೀಕ್ಷೆಗೆ ಶೇ.80 ರಿಯಾಯಿತಿ, ಪಂಚಕರ್ಮ ಚಿಕಿತ್ಸೆ ಹಾಗೂ ಪ್ರಯೋಗಾಲಯ ಪರೀಕ್ಷೆಗಳಿಗೆ ಶೇ.50 ರಿಯಾಯಿತಿ, ಔಷಧಿಗಳಿಗೆ ಶೇ.10 ರಿಯಾಯಿತಿ ನೀಡಲಾಗುತ್ತದೆ.
ಫಿಸಿಯೋಥೆರಪಿಗೆ ಶೇ.20, ಅಕ್ಯುಪಂಕ್ಚರ್ ಥೆರಪಿ ಹಾಗೂ ಟೆನ್ಸ್ ಥೆರಪಿ ಶೇ.20 ರಿಯಾಯಿತಿ ದೊರೆಯಲಿದೆ. ಇದಲ್ಲದೆ ಉಚಿತ ಆಹಾರ ಪದ್ಧತಿ ಸಲಹೆ, ಯೋಗ ಸಮಾಲೋಚನೆ ಹಾಗೂ ಒಳರೋಗಿ ಚಿಕಿತ್ಸೆಗೆ ರಿಯಾಯಿತಿ ಸೌಲಭ್ಯ ಕಲ್ಪಿಸಲಾಗಿದೆ.
ಫ್ಯಾಮಿಲಿ ಆರೋಗ್ಯ ಕಾರ್ಡ್‌ಗೆ ಶೇ.50 ರಿಯಾಯಿತಿ ನೀಡಲಾಗುವುದು.
ಶಿಬಿರವು ಉಡುಪಿ ಅಜ್ಜರಕಾಡಿನ ಮುನಿಯಾಲ್ ಆಯುರ್ವೇದ ಫ್ಯಾಮಿಲಿ ಕ್ಲಿನಿಕ್ ಹಾಗೂ ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲ್ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8123403233 ಸಂಪರ್ಕಿಸಬಹುದು.















