“ಊಟಕ್ಕೆ ಇಲ್ಲದ ಉಪ್ಪಿನ ಕಾಯಿಯಾಗ ಬಾರದು” ಮಂಗಳೂರಿನಲ್ಲಿ ನಡೆಯುತ್ತಿರುವ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಬಹುನಿರೀಕ್ಷತ ವಿಷಯವೆಂದರೆ ತುಳುವಿಗೆ ರಾಜ್ಯದಲ್ಲಿ ಎರಡನೇಯ ಅಧಿಕೃತ ಭಾಷೆಯಾಗಿ ಪರಿಗಣಿಸುವಂತೆ ಕೇಂದ್ರಕ್ಕೆ ವರದಿ ಸಲ್ಲಿಸುವ ನಿಧಾ೯ರ ತೆಗೆದುಕೊಳ್ಳುವ ವಿಷಯ.ಇದು ಸಂತಸದ ವಿಚಾರವೇ ಆದರೆ ಇಲ್ಲಿ ಕೆಲವೊಂದು ಪ್ರಮುಖ ತಾಂತ್ರಿಕ ವಿಷಯಗಳು ಉದ್ಬವವಾಗುವುದಂತು ನಿಜ?
*ಇದಾಗಲೇ ಕನಾ೯ಟಕ ಸರ್ಕಾರ ತನ್ನ ಶಿಕ್ಷಣ ನೀತಿಯಲ್ಲಿ ದ್ವಿ ಭಾಷಾ ನೀತಿಯನ್ನು ಒಪ್ಪಿಕೊಂಡು ಜಾರಿಗೊಳಿಸಿದೆ. ಹಿಂದಿಯನ್ನು ದೂರ ಮಾಡ ಬೇಕು ಅನ್ನುವ ರಾಜಕೀಯ ಕಾರಣಕೊಸ್ಕರ ಈ ನಿಧಾ೯ರ ತೆಗೆದುಕೊಂಡಿದಂತು ಸತ್ಯ.ಈ ನಿಟ್ಟಿನಲ್ಲಿ ಸುಪ್ರೀಂ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆಯ ನಿದೇ೯ಶನ ನೀಡಿದೆ.ಅದು ಏನೇ ಇರಲಿ ಒಂದು ತುಳು ಭಾಷೆಗೆ ಎರಡನೇಯ ಅಧಿಕೃತ ಭಾಷೆ ಎಂದು ಪರಿಗಣಿಸಿದ ಮೇಲೆ ನಮ್ಮ ಶಿಕ್ಷಣ ಭಾಷಾ ನೀತಿಯ ನಿಯಮದ ಪ್ರಕಾರ ಶಾಲೆಯಲ್ಲಿ ಪ್ರತಿಯೊಂದು ಮಗು ತನ್ನ ಕಲಿಕೆಯ ಪ್ರಕ್ರಿಯೆಯಲ್ಲಿ ತುಳುವನ್ನು ಎಷ್ಟನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳ ಬೇಕು.ಸಾಮಾನ್ಯವಾಗಿ ಪ್ರತಿಯೊಂದು ಕನ್ನಡ ಇಂಗ್ಲಿಷ್ ಭಾಷೆಯನ್ನುಕಲಿಕಾ ಭಾಷೆಯಾಗಿ ಖಂಡಿತವಾಗಿಯೂ ಆಯ್ಕೆ ಮಾಡಿಕೊಳ್ಳುವುದು ಸಹಜ ತಾನೆ?ಇಲ್ಲಿ ತುಳುವಿಗೆ ಎಲ್ಲಿದೆ ಸ್ಥಾನ.ತುಳು ಬರೇ ಆಡು ಭಾಷೆಯಾಗಿ ಮುಂದುವರಿಯ ಬಹುದೇ ಹೊರತು ರಾಜ್ಯದ ಅಧಿಕೃತ ಭಾಷೆಯಾಗಿ ಯಾವ ರೀತಿಯಲ್ಲಿ ಮಾನ್ಯತೆ ಸಿಗ ಬಹುದು.ಇದು ಊಟಕ್ಕೆ ಇಲ್ಲದ ಉಪ್ಪಿನ ಕಾಯಿ ಅನ್ನುವ ಗಾದೆಯಂತೆ ಆಗ ಬಾರದಲ್ಲ.
ಪ್ರತಿಯೊಂದು ಮಗುವಿಗೆ ಭಾಷಾ ಕಲಿಕೆಯಲ್ಲಿ ನಿಬ೯ಂಧ ಹೇರಬಾರದು.ಅದು ಪ್ರತಿಯೆಾಂದು ಮಗುವಿನ ಭಾಷಾಕಲಿಕೆಯ ಹಕ್ಕು.
ಒಂದಂತು ಸತ್ಯ ದ್ವಿಭಾಷಾ ನೀತಿಯನ್ನು ಒಪ್ಪಿಕೊಂಡ ರಾಜ್ಯ ಸರ್ಕಾರ ಕರಾವಳಿಗರನ್ನು ತೃಪ್ತಿ ಪಡಿಸುವ ನಿಟ್ಟಿನಲ್ಲಿ ತುಳುವರ ಬೇಡಿಕೆಯನ್ನು ಮಾನ್ಯ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದರ ಮೂಲಕ ಜಾಣ್ಮೆಯ ನಾಟಕದ ನಡೆ ಮಾಡ ಬಹುದು…ಆದರೆ ತನ್ನ ಶಿಕ್ಷಣ ನೀತಿಯಲ್ಲಿ ತುಳುವಿಗೆ ಯಾವ ರೀತಿಯಲ್ಲಿ ಮಾನ್ಯತೆ ಕೊಡ ಬಹುದು ಅನ್ನುವುದು ಬಹು ದೊಡ್ಡ ಪ್ರಶ್ನೆ.::>.ವಿಶ್ಲೇಷಣೆ :ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.















