ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ವ್ಯತ್ಯಾಸ. ಆಲಮಟ್ಟಿ, ಹಿಡ್ಕಲ್, ಭೀಮಾ ಲಿಫ್ಟ್ ಭರ್ತಿ. ಕಾವೇರಿ ಕೊಳ್ಳದ ಕೆ.ಆರ್.ಸಾಗರ, ಕಬಿನಿ ಮಟ್ಟ ತಗ್ಗಿದೆ.
ಬೆಂಗಳೂರು: ಕರ್ನಾಟಕದಾದ್ಯಂತ ಮಳೆಯ (Rain) ಅಬ್ಬರದಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿವೆ. ಉತ್ತರ ಕರ್ನಾಟಕ ಹಾಗೂ ಕರಾವಳಿ-ಮಲೆನಾಡಿನ ಕೆಲವು ಭಾಗಗಳಲ್ಲಿ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದರೆ, ಕಾವೇರಿ (Cauvery) ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ನೀರು ನಿರೀಕ್ಷಿತ ಮಟ್ಟಕ್ಕಿಂತ ಕೊಂಚ ತಗ್ಗಿದೆ.
ಭರ್ತಿಯಾಗಿ ದಾಖಲೆ
ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಅಣೆಕಟ್ಟು ಶೇಕಡಾ 99.36ರಷ್ಟು ಭರ್ತಿಯಾಗಿದ್ದು, ಗರಿಷ್ಠ ಮಟ್ಟವಾದ 1704.81 ಅಡಿಗೆ ತಲುಪುವಲ್ಲಿ ಕೇವಲ ಕೆಲವೇ ಇಂಚುಗಳು ಮಾತ್ರ ಬಾಕಿ ಉಳಿದಿವೆ. ಒಟ್ಟು 123.081 ಟಿಎಂಸಿ ಸಾಮರ್ಥ್ಯವಿರುವ ಇಲ್ಲಿ ಸದ್ಯ 122.300 ಟಿಎಂಸಿ ನೀರು ಸಂಗ್ರಹವಿದೆ. ಹಾಗೆಯೇ ಹಿಡ್ಕಲ್ ಅಣೆಕಟ್ಟು ಶೇಕಡಾ 99.50ರಷ್ಟು ತುಂಬಿದ್ದು (50.745 ಟಿಎಂಸಿ), ಭೀಮಾ ಲಿಫ್ಟ್ ಅಣೆಕಟ್ಟು (ಸೊನ್ನ ಬ್ಯಾರೇಜ್) ಶೇಕಡಾ 100ರಷ್ಟು ಸಂಪೂರ್ಣ ಭರ್ತಿಯಾಗಿ ದಾಖಲೆ ಬರೆದಿದೆ. ನಾರಾಯಣಪುರ ಅಣೆಕಟ್ಟು ಕೂಡ ಶೇಕಡಾ 97.43ರಷ್ಟು ತುಂಬಿ ತುಳುಕುತ್ತಿದೆ.















