ಉಡುಪಿ: ಪ್ರಸಿದ್ಧ ಯಕೃತ್ತು ಕಸಿ ಹಾಗೂ ಹೆಪಟೋಬಿಲಿಯರಿ-ಪ್ಯಾಂಕ್ರಿಯಾಟಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ. ನಿಖಿಲ್ ಸುರೇಶ್ ಅವರು ಸೆಪ್ಟೆಂಬರ್ 11ರಂದು ಉಡುಪಿಯಲ್ಲಿ ರೋಗಿಗಳ ಸಮಾಲೋಚನೆಗೆ ಲಭ್ಯವಿರಲಿದ್ದಾರೆ.
10ಕ್ಕೂ ಹೆಚ್ಚು ವರ್ಷಗಳ ವೈದ್ಯಕೀಯ ಅನುಭವ ಹೊಂದಿರುವ ಡಾ. ನಿಖಿಲ್ ಸುರೇಶ್ ಅವರು Consultant – Hepatobiliary, Pancreatic & Liver Transplant Surgery ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು MBBS (Hons), MRCS (Edinburgh), MS (General Surgery), MCh (Surgical Oncology), FEBS (Liver Transplant) ಹಾಗೂ FRCS (Edinburgh) ಸೇರಿದಂತೆ ವಿವಿಧ ವೈದ್ಯಕೀಯ ಅರ್ಹತೆಗಳನ್ನು ಹೊಂದಿದ್ದಾರೆ.
ಯಕೃತ್ತು ಕಸಿ, ಹೆಪಟಾಲಜಿ ಸೇರಿದಂತೆ ಯಕೃತ್ತಿಗೆ ಸಂಬಂಧಿಸಿದ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ತಜ್ಞರಿಂದ ಸಮಾಲೋಚನೆ ಪಡೆಯಲು ಅವಕಾಶವಿದೆ.
ಸೆಪ್ಟೆಂಬರ್ 11ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಉಡುಪಿಯ ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿ ಸಮಾಲೋಚನೆ ನಡೆಯಲಿದೆ.
ಹೆಚ್ಚಿನ ಮಾಹಿತಿ ಹಾಗೂ ಸಮಾಲೋಚನೆಗಾಗಿ 98866 84193 ಸಂಖ್ಯೆಯನ್ನು ಸಂಪರ್ಕಿಸಬಹುದು.















