ಮನೆ ಮನೆಗೆ ಹೋಗಿ ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಕಾರ್ಯ ಶುರುವಾಗ್ತಿದ್ದು, ಯೋಜನೆಗೆ ಫಲಾನುಭವಿಗಳಾಗಲು ಮಹಿಳೆಯರು ಸೂಕ್ತ ದಾಖಲೆಗಳನ್ನ ನೀಡಬೇಕಿದೆ.
ಬೆಂಗಳೂರು (ಆ.31): ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು (Gruhalakshmi Yojana) ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2,000 ಆರ್ಥಿಕ ಸಹಾಯ ನೀಡೋ ಯೋಜನೆ ಆಗಿದೆ. ಆಗಸ್ಟ್ 2026ಕ್ಕೆ ಈ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ್ದು, ಇದೀಗ ಸರ್ಕಾರ ಗೃಹಲಕ್ಷ್ಮಿ (Gruhalakshmi ) ಯೋಜನೆ ಮರುಪರಿಶೀಲನೆಗೆ ಮುಂದಾಗಿದೆ. ಮನೆ-ಮನೆಗೆ ಭೇಟಿ ನೀಡುವ ಸಿಬ್ಬಂದಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸುವ ಕ್ರಮ ಇದಾಗಿದೆ. ಗೃಹಲಕ್ಷ್ಮಿ ಯೋಜನೆಗೂ ಡೆಡ್ಲೈನ್ (Deadline) ನೀಡಲಾಗಿದ್ದು, ಜೊತೆ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಗೃಹಲಕ್ಷ್ಮಿ ಮರುಪರಿಶೀಲನೆಗೂ ಡೆಡ್ಲೈನ್
ಮನೆ ಮನೆಗೆ ಹೋಗಿ ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಕಾರ್ಯ ಶುರುವಾಗ್ತಿದ್ದು, ಯೋಜನೆಗೆ ಫಲಾನುಭವಿಗಳಾಗಲು ಮಹಿಳೆಯರು ಸೂಕ್ತ ದಾಖಲೆಗಳನ್ನ ನೀಡಬೇಕಿದೆ. ಮನೆಗೆ ಬಂದಾಗ ಮನೆಯಲ್ಲಿದ್ದವರು ಸರಿಯಾದ ಮಾಹಿತಿ ನೀಡಿದ್ರೆ ಮಾತ್ರ ಅಂಥವರಿಗೆ ಸೌಲಭ್ಯ ಮುಂದುವರಿಯಲಿದೆ. ಮರುಪರಿಶೀಲನೆಗೆ ಕೇವಲ ಒಂದು ತಿಂಗಳ ಡೆಡ್ಲೈನ್ ಇರಲಿದೆ.
ವೋಟರ್ ಐಡಿ ಇಲ್ಲದವರಿಗೆ 2000 ಕಟ್!
ವೋಟರ್ ಐಡಿ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯಿಂದಲೂ ಫಲಾನುಭವಿ ಹೆಸರು ಡಿಲೀಟ್ ಆಗಲಿದೆ. ಇತ್ತೀಚಿಗೆ ನಡೆದ SIR ಪ್ರಕ್ರಿಯೆನಲ್ಲಿ ಹೆಸರು ಡಿಲೀಟ್ ಆಗಿದ್ರೆ. ಅಂಥಹ ಮಹಿಳೆಯರನ್ನ ಗೃಹಲಕ್ಷ್ಮಿ ಯೋಜನೆಯಿಂದಲೂ ತೆಗೆದು ಹಾಕಲಾಗುತ್ತೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ..















