ವೃತ್ತಿ ಸಂಯೋಜಕರ ಹುದ್ದೆ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರೌಢಶಾಲೆ/ಪದವಿಪೂರ್ವ ಕಾಲೇಜುಗಳಲ್ಲಿ ಕೌಶಲ್ಯ ಶಿಕ್ಷಣ ಕಾರ್ಯಕ್ರಮವನ್ನು ವಿಸ್ತರಿಸಲಾಗಿದ್ದು, ಜಿಲ್ಲೆಯ 25 ಶಾಲೆಗಳಲ್ಲಿ ಕೃತಕ ಬುದ್ದಿಮತ್ತೆ ವಿಷಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಶೈಕ್ಷಣಿಕ ಮೇಲ್ವಿಚಾರಣೆ, ತಾಂತ್ರಿಕ ಮಾರ್ಗದರ್ಶನ, ಕಾರ್ಯಕ್ರಮದ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಸಮನ್ವಯ ಕಾರ್ಯಗಳನ್ನು ನಿರ್ವಹಿಸಲು ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಓರ್ವ ವೃತ್ತಿ ಸಂಯೋಜಕರನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ / ಇನ್ಫರ್‌ಮೇಷನ್ ಟೆಕ್ನಾಲಜಿ, ಬ್ಯಾಚುರ‍್ಸ್ ಡಿಗ್ರಿ ಇನ್ ಕಂಪ್ಯೂಟರ್ ಅಪ್ಲಿಕೇಷನ್ / ಕಂಪ್ಯೂಟರ್ ಸೈನ್ಸ್ / ಇನ್ಫರ್‌ಮೇಷನ್ ಟೆಕ್ನಾಲಜಿ (ಬಿ.ಸಿ.ಎ, ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್, ಬಿ.ಎಸ್ಸಿ ಇನ್ಫರ್‌ಮೇಷನ್ ಟೆಕ್ನಾಲಜಿ), ಗ್ರ್ಯಾಜುಯೇಟ್ ವಿಥ್ ಪಿ.ಜಿ.ಡಿ.ಸಿ.ಎ (ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್), ಡಿ.ಓ.ಇ.ಎ.ಸಿ.ಸಿ ‘ಂ’ ಲೆವೆಲ್ ಸರ್ಟಿಫಿಕೇಟ್ ಪದವಿಯನ್ನು ಹೊಂದಿರುವ, ಕನಿಷ್ಠ 3 ವರ್ಷದ ಅನುಭವ, ಇಂಗ್ಲೀಷ್ ಹಾಗೂ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವ ಜ್ಞಾನ ಹೊಂದಿರುವ, ತರಬೇತಿ ನೀಡಲು ಮೂಲಭೂತ ಕಂಪ್ಯೂಟರ್ ಹಾಗೂ ತಾಂತ್ರಿಕ ಕಲೆ ತಿಳಿದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟಂಬರ್ 6 ಕೊನೆಯ ದಿನವಾಗಿದ್ದು, ಆಯ್ಕೆಯಾದ ವೃತ್ತಿ ಸಂಯೋಜಕರಿಗೆ ಮಾಸಿಕ 30 ಸಾವಿರ ರೂ ಗೌರವಧನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಾ.ಶಿ.ಇಲಾಖೆ, ರಜತಾದ್ರಿ, ಮಣಿಪಾಲ ದೂ.ಸಂ:0820-2575383 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.