ಹೊಸದಿಲ್ಲಿಯ ಕಂಪೆನಿ ಸೆಕ್ರೆಟರಿ ಪ್ರೊಫೆಷನಲ್ (CS Professional) ICSI (Institute of Company Secretaries of India) ಸಂಸ್ಥೆಯಿಂದ ನಡೆಸಲ್ಪಟ್ಟ ಜೂನ್ 2026 ಪರೀಕ್ಷೆಯಲ್ಲಿ ಹಿತೇಶ್ ಆರ್. ಎನ್. ಉತ್ತೀರ್ಣರಾಗಿದ್ದಾರೆ.
ಅವರು ಬಂಟ್ವಾಳದ ರತ್ನಕರ್ ನಡಾರ್ ಹಾಗೂ ಹರಿಣಾಕ್ಷಿ ದಂಪತಿಗಳ ಸುಪುತ್ರನಾಗಿದ್ದು, ತಮ್ಮ ಆರ್ಟಿಕಲ್ ಶಿಪ್ ನ್ನು ಸಿಎಸ್ ಉಲ್ಲಾಸ್ ಭಟ್ & ಅಸೋಸಿಯೇಟ್ ಮಂಗಳೂರಿನಲ್ಲಿ ನಡೆಸುತ್ತಿದ್ದಾರೆ.
ಸಿಎಸ್ ಇಇಟಿ, ಸಿಎಸ್ ಎಕ್ಸಿಕ್ಯೂಟಿವ್ ಹಾಗೂ ಪದವಿ ವಿದ್ಯಾಭ್ಯಾಸವನ್ನು ಮಂಗಳೂರಿನ ತ್ರಿಶಾ ಸಂಧ್ಯಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.
ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಯ ಸಾಧನೆಯನ್ನು ಅಭಿನಂದಿಸಿದ್ದಾರೆ















