ತ್ರಿಶಾ ಕ್ಲಾಸಸ್: ಸಿಎಸ್ ಪ್ರೊಫೆಷನಲ್ ಪರೀಕ್ಷೆಯಲ್ಲಿ ದಿಶಾ ಚಿತ್ತಲ್ ಉತ್ತೀರ್ಣ

ಹೊಸದಿಲ್ಲಿಯ ಕಂಪೆನಿ ಸೆಕ್ರೆಟರಿ ಪ್ರೊಫೆಷನಲ್ (CS Professional) ICSI (Institute of Company Secretaries of India) ಸಂಸ್ಥೆಯಿಂದ ನಡೆಸಲ್ಪಟ್ಟ ಜೂನ್ 2026 ಪರೀಕ್ಷೆಯಲ್ಲಿ ದಿಶಾ ಚಿತ್ತಲ್ ಉತ್ತೀರ್ಣರಾಗಿದ್ದಾರೆ.

ಅವರು ಕಾರವಾರದ ವಿನಾಯಕ್ ಚಿತ್ತಲ್ & ವನಿತಾ ಚಿತ್ತಲ್ ದಂಪತಿಗಳ ಸುಪುತ್ರಿಯಾಗಿದ್ದು, ತಮ್ಮ ಆರ್ಟಿಕಲ್ ಶಿಪ್ ನ್ನು Pharmaids Pharmaceuticals Limited ಬೆಂಗಳೂರಿನಲ್ಲಿ ನಡೆಸುತ್ತಿದ್ದಾರೆ.

ಸಿಎಸ್ ಫೌಂಡೇಶನ್, ಸಿಎಸ್ ಎಕ್ಸಿಕ್ಯೂಟಿವ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ, ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್‌ ಮ್ಯಾನೇಜ್ಮೆಂಟ್ ನಲ್ಲಿ ಪಡೆದುಕೊಂಡಿದ್ದಾರೆ.

ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಯ ಸಾಧನೆಯನ್ನು ಅಭಿನಂದಿಸಿದ್ದಾರೆ.